ಮಂಗಳೂರು: ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಬಿಜೆಪಿಗೆ ಸೇರಿದ್ದ ಎಲ್ಲಾ ಶಾಸಕರದ್ದು ನಾಯಿಪಾಡು ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
Advertisement
ಮಂಗಳೂರಿನಲ್ಲಿ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಪಾಡೇ ನಾಯಿ ಪಾಡಾಗಿದೆ. ವಲಸೆ ಬಂದವರು ಎಂಬ ಕಾರಣಕ್ಕೆ ಸಿದ್ದು ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗ್ತಿದೆ. ದಿನನಿತ್ಯ ಪ್ರಚಾರದಲ್ಲಿರಲು ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಜೊತೆಗೆ ಡಿಕೆಶಿ ಕೈ ಮೇಲಾಗ್ತಿದೆ ಅನ್ನೋ ಕಾರಣಕ್ಕೆ ಈ ರೀತಿ ಮಾತನಾಡುತ್ತಿದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ, ಅನುಭವಿ ರಾಜಕಾರಣಿ ಈ ರೀತಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಧಮ್ ಇದ್ರೆ ಚಿದಂಬರಂ ಮುಂದೆ ನಿಂತು ಮಾತಾಡಲಿ – ಕಟೀಲ್ ಟಾಂಗ್
Advertisement
Advertisement
ಉಪಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದ ಅವರು ಈ ಚುನಾವಣೆ ಫಲಿತಾಂಶದಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ನಾವು ಈ ಎರಡೂ ಕ್ಷೇತ್ರ ಗೆಲ್ಲುವುದು ನಿಶ್ಚಿತವಾಗಿದೆ. ಗೆದ್ದ ನಂತರ ಮುನಿರತ್ನರಿಗೆ ಸಚಿವ ಸ್ಥಾನ ನೀಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಮಹದಾಯಿ ವಿಚಾರದಲ್ಲಿ ಗೋವಾದ ಪರವಾಗಿ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ಕಾಂಗ್ರೆಸ್ ನ ಇಬ್ಬಗೆಯ ನೀತಿಗೆ ಒಂದು ಉದಾಹರಣೆ. ಇಲ್ಲಿದ್ದಾಗ ಒಂದು ಅಲ್ಲಿದ್ದಾಗ ಒಂದು ಮಾತನಾಡ್ತಾರೆ. ಈ ಮೂಲಕ ಕಾಂಗ್ರೆಸ್ ರಾಜ್ಯದ ಏಳಿಗೆ ಪರವಾಗಿ ಇಲ್ಲ ಅನ್ನೋದಕ್ಕೆ ಇದು ಉದಾಹರಣೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪೋಕರಿ ಕಟೀಲ್ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್: ಸಿದ್ದರಾಮಯ್ಯ