ದುಬೈ: ಕ್ರಿಕೆಟ್‍ನಲ್ಲಿ ಕಳ್ಳಾಟವಾಡಿ ಹಲವು ದೇಶದ ಆಟಗಾರರು ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿದ್ದರು. ಕೆಲ ಆಟಗಾರರು ಕಳ್ಳಾಟವಾಡಿ ತಮ್ಮ ಕ್ರಿಕೆಟ್ ವೃತ್ತಿ ಜೀವನವನ್ನೇ ಕಳೆದುಕೊಂಡಿದ್ದಾರೆ. ಇದನ್ನೆಲ್ಲ ನೋಡಿ ಇನ್ನು ಕೂಡ ಬುದ್ಧಿಕಲಿಯದ ಯುಎಇ ತಂಡದ ಆಟಗಾರಿಬ್ಬರು ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಆಟಗಾರರಿಗೆ ಐಸಿಸಿ ಎಂಟು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ.
Advertisement
ಯುಎಇ ತಂಡದ ಅನಿಭವಿ ಆಟಗಾರರಾದ ಮೊಹಮ್ಮದ್ ನವೀದ್ ಮತ್ತು ಶೈಮೆನ್ ಅನ್ವರ್ ಬಟ್ ನಿಷೇಧಕ್ಕೊಳಗಾದ ಆಟಗಾರರು. ಇವರಿಬ್ಬರು ಕೂಡ 2019ರ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಯತ್ನಿಸಿದ ಆರೋಪದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದೀಗ ಐಸಿಸಿ ಇವರಿಗೆ 8 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ನಿಷೇಧಕ್ಕೆ ಒಳಪಡಿಸಿದೆ. ಈಗಾಗಲೇ ಇಬ್ಬರು ಆಟಗಾರರ ನಿಷೇಧ ಅವಧಿ 2019ರ ಅಕ್ಟೋಬರ್ 16 ರಿಂದ ಪ್ರಾರಂಭವಾಗಿದೆ ಎಂದು ಐಸಿಸಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.
Advertisement
Advertisement
ಯುಎಇ ತಂಡದ ನಾಯಕನಾಗಿದ್ದ ನವೀದ್ ಯುಎಇ ಪರ 39 ಏಕದಿನ ಮತ್ತು 31 ಟಿ20 ಪಂದ್ಯಗಳನ್ನು ಆಡಿ ಯುಎಇ ತಂಡದ ಗರಿಷ್ಠ ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಗೂ ಪಾತ್ರರಾಗಿದ್ದರು. ಆದರೆ ಇದೀಗ ನಿಷೇಧ ಶಿಕ್ಷೆಗೆ ಒಳಗಾಗಿ ತಮ್ಮ ಕ್ರಿಕೆಟ್ ವೃತ್ತಿ ಬದುಕನ್ನೇ ಹಾಳು ಮಾಡಿಕೊಂಡಿದ್ದಾರೆ.
Advertisement
ನಿಷೇಧಕ್ಕೆ ಒಳಗಾದ ಇನ್ನೋರ್ವ ಆಟಗಾರ ಯುಎಇ ತಂಡದ ಆರಂಭಿಕ ಆಟಗಾರರಾಗಿದ್ದ ಶೈಮೆನ್ ಅನ್ವರ್ ಬಟ್, ಯುಎಇ ಪರ ಬಟ್ 40 ಏಕದಿನ ಪಂದ್ಯ ಮತ್ತು 32 ಟಿ20 ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮ್ಯಾನ್ ಆಗಿ ತಂಡದ ಪರ ಮಿಂಚಿದ್ದರು. ಆದರೆ ಇದೀಗ ಫಿಕ್ಸಿಂಗ್ ಆರೋಪದಡಿ 8 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
UAE's Mohammad Naveed and Shaiman Anwar Butt have been banned from all cricket for eight years for breaching the ICC Anti-Corruption Code.
Details ????
— ICC (@ICC) March 16, 2021
ಕ್ರಿಕೆಟ್‍ನಲ್ಲಿ ಈಗಷ್ಟೆ ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಯುಎಇ ತಂಡದ ಪ್ರಮುಖ ಆಟಗಾರರಾಗಿದ್ದ ಇಬ್ಬರೂ ಆಟಗಾರರು ಈ ರೀತಿ ಕಳ್ಳಟದಿಂದಾಗಿ ತಂಡದಿಂದ ಹೊರ ಹೋಗಿ ಇದೀಗ ಯುಎಇ ತಂಡಕ್ಕೂ ದೊಡ್ಡ ಹೊಡೆತ ಬಿದ್ದಂತಾಗಿದೆ.
ಪಾಕಿಸ್ತಾನ, ಆಸ್ಟ್ರೇಲಿಯಾ, ಭಾರತ, ಬಾಂಗ್ಲದೇಶದ ಸ್ಟಾರ್ ಆಟಗಾರರು ಈ ಹಿಂದೆ ಫಿಕ್ಸಿಂಗ್ ಆರೋಪದಲ್ಲಿ ನಿಷೇಧ ಶಿಕ್ಷೆಗೆ ಒಳಗಾಗಿದ್ದರು ಇವರಿಗು ಕೂಡ ಐಸಿಸಿ ಶಿಕ್ಷೆ ವಿಧಿಸಿತ್ತು. ಆದರೂ ಕೂಡ ಇನ್ನು ಬುದ್ಧಿ ಕಲಿಯದ ಕ್ರಿಕೆಟ್ ಆಟಗಾರರು ಫಿಕ್ಸಿಂಗ್ ಭೂತಕ್ಕೆ ಒಳಗಾಗಿ ತಮ್ಮ ಕ್ರಿಕೆಟ್ ಬದುಕಿಗೆ ಕಲ್ಲು ಹಾಕಿಕೊಳ್ಳುತ್ತಿರುವುದು ವಿಪರ್ಯಾಸ.