ಕಳ್ಳರ ವಿರುದ್ಧ ಹೋರಾಡಿ ತನ್ನ ಮಗಳನ್ನು ರಕ್ಷಿಸಿಕೊಂಡ ತಾಯಿ – ವಿಡಿಯೋ ವೈರಲ್

Public TV
2 Min Read
New Delhi Child Mother

– ಬೈಕ್ ಮೇಲೆ ಜಿಗಿದು ಮಗವನ್ನು ಕಿತ್ತುಕೊಂಡ ಅಮ್ಮ
– ಮಗುವಿನ ಚಿಕ್ಕಪ್ಪ ಅರೆಸ್ಟ್, 40 ಲಕ್ಷ ದೋಚಲು ಸ್ಕೆಚ್

ನವದೆಹಲಿ: ಮಗುವನ್ನು ಅಪಹರಿಸಲು ಬಂದ ಕಳ್ಳರ ವಿರುದ್ಧ ಹೋರಾಡಿ ತಾಯಿಯೊಬ್ಬಳು ತನ್ನ ಮಗವನ್ನು ಕಾಪಾಡಿಕೊಂಡಿರುವ ಘಟನೆ ದೆಹಲಿಯ ಶಕರ್‍ಪುರದಲ್ಲಿ ನಡೆದಿದೆ.

ಮಗುವನ್ನು ಅಪರಹರಿಸಲು ಮಾಡಲು ಪ್ರಯತ್ನಿಸಿದ ಮಗುವಿನ ಸ್ವಂತ ಚಿಕ್ಕಪ್ಪ ಉಪೇಂದ್ರ ಕುಮಾರ್ ಗುಪ್ತಾ (35), ಆತನ ಸ್ನೇಹಿತ ಧೀರಜ್ (34) ಮತ್ತು ಕೃತ್ಯಕ್ಕೆ ಬಳಸಲಾದ ಬೈಕ್ ಮಾಲೀಕನನ್ನು ಬಂಧಿಸಲಾಗಿದೆ. ಮಗುವನ್ನು ಅಪಹರಣ ಮಾಡಿ 40 ಲಕ್ಷಕ್ಕೆ ಬೇಡಿಕೆ ಇಡಲು ಆರೋಪಿಗಳು ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

New Delhi Child Mother 3

ಮಗುವನ್ನು ಅಪರಹರಿಸಲು ಆರೋಪಿಗಳು ಸೆಲ್ಸ್ ಮ್ಯಾನ್ ರೀತಿ ಬಟ್ಟೆ ಧರಿಸಿ ಬೈಕಿನಲ್ಲಿ ಏರಿಯಾಗೆ ಬಂದಿದ್ದಾರೆ. ನಂತರ ಏರಿಯಾದಲ್ಲಿ ಅನುಮಾನಸ್ಪದವಾಗಿ ಓಡಾಡುವುದನ್ನು ಕಂಡು ಅಲ್ಲಿನ ವೃದ್ಧರೊಬ್ಬರು ಯಾರು ನೀವು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆರೋಪಿಗಳು ನಾವು ಸೆಲ್ಸ್ ಮ್ಯಾನ್‍ಗಳು ತುಂಬ ಬಾಯಾರಿಕೆ ಆಗುತ್ತಿದೆ ಕುಡಿಯಲು ನೀರು ಬೇಕು ಎಂದು ಕೇಳಿದ್ದಾರೆ. ಆದರೆ ಅವರು ಭಯದಿಂದ ಬಾಗಿಲು ತೆಗೆದಿಲ್ಲ.

ನಂತರ ಆರೋಪಿಗಳು ನೇರವಾಗಿ ಮಗುವಿನ ಮನೆಗೆ ಹೋಗಿ ಬೆಲ್ ಬಾರಿಸಿದ್ದಾರೆ. ಆಗ ಮಹಿಳೆ ಮಗುವನ್ನು ಕರೆದುಕೊಂಡು ಬಂದು ಗೇಟ್ ಓಪನ್ ಮಾಡಿದ್ದಾರೆ. ಆಗ ಕುಡಿಯಲು ಸ್ವಲ್ಪ ನೀರು ಕೊಡಿ ಎಂದು ಆರೋಪಿಯೊಬ್ಬ ಕೇಳಿದ್ದಾನೆ. ಆರೋಪಿಯನ್ನು ನಂಬಿದ ಮಹಿಳೆ ಮಗುವನ್ನು ಬಿಟ್ಟು ನೀರು ತರಲು ಹೋಗಿದ್ದಾರೆ. ಆಗ ಆರೋಪಿ ಮಗುವನ್ನು ಎತ್ತಿಕೊಂಡು ಬೈಕಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.

New Delhi Child Mother 2

ಇದನ್ನು ಗಮನಿಸಿದ ತಾಯಿ ತಕ್ಷಣ ಓಡಿ ಬಂದು ಬೈಕಿನ ಮೇಲೆ ಜಿಗಿದು ಬೈಕ್ ಅನ್ನು ಕೆಳಗೆ ಬೀಳಿಸಿದ್ದಾರೆ. ಆಗ ತಕ್ಷಣ ಎದ್ದು, ಮಗುವನ್ನು ಕಳ್ಳನ ಕೈಯಿಂದ ಕಿತ್ತುಕೊಂಡಿದ್ದಾರೆ. ಆಗ ಸ್ಥಳೀಯರು ಬಂದಿದ್ದನ್ನು ಕಂಡ ಕಳ್ಳರು ಬೈಕ್ ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ ಸ್ಥಳೀಯರು ಬೈಕಿನ ಸಹಾಯದಿಂದ ರಸ್ತೆಯನ್ನು ಬ್ಲಾಕ್ ಮಾಡಿ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಗಳು ಬೈಕ್ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದು ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Mother

ಈ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಪಿ ಜಸ್ಮೀತ್ ಸಿಂಗ್, ತಾಯಿ ಮತ್ತು ಸ್ಥಳೀಯರ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ಮಗುವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಸ್ಥಳೀಯ ವಿರೋಧದಿಂದ ಆರೋಪಿಗಳು ಬೈಕ್ ಅಲ್ಲಿಯೇ ಬಿಟ್ಟು ಹೋಗಿದ್ದರು. ಈ ಬೈಕ್ ಮಾಲೀಕನ ಸಹಾಯದಿಂದ ನಾವು ಆರೋಪಿಗಳನ್ನು ಬಂಧಿಸಿದ್ದೇವೆ. ಆರೋಪಿ ಮಗುವಿನ ಚಿಕ್ಕಪ್ಪ ಎಂದು ತಿಳಿದು ಬಂದಿದೆ. ಆತ ಮಗುವನ್ನು ಅಪಹರಿಸಿ 40 ಲಕ್ಷ ರೂಪಾಯಿಗೆ ಬೇಡಿಕೆ ಇಡಲು ತೀರ್ಮಾನಿಸಿದ್ದ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *