-ಸಾರಥಿಯ ಸ್ಟೈಲ್ಗೆ ಫ್ಯಾನ್ಸ್ ಫಿದಾ
ಬೆಂಗಳೂರು: ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾ ರಾಬರ್ಟ್ ಚಿತ್ರ ತಂಡದಿಂದ ಕಲರ್ ಫುಲ್ ಆಗಿರುವ ಚಕ್ರವರ್ತಿಯ ಹೊಸ ಲುಕ್ ಝಗಮಗಿಸುತ್ತಿದೆ.
ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಯಜಮಾನ, ಉಮಾಪತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಹಾರೈಸಿ, ಪೋಸ್ಟರ್ ಹಂಚಿಕೊಂಡಿದ್ದಾರೆ.
ಪಕ್ಕಾ ರೆಟ್ರೋ ಲುಕ್, ಕೈಯಲ್ಲೊಂದು ಸಿಗರೇಟ್, ಕೆಂಪು ಕನ್ನಡ, ಮುಂದೊಂದು ಮೈಕ್, ಪಕ್ಕದಲ್ಲೊಂದು ಗಿಟಾರ್ ಇಟ್ಟುಕೊಂಡು ವಿರಾಜಮಾನವಾಗಿರು ಚಕ್ರವರ್ತಿಗೆ ಅಭಿಮಾನಿಗಳು ಉಘೇ ಉಘೇ ಅನ್ನುತ್ತಿದ್ದಾರೆ.
ನಮ್ಮ #Roberrt ಚಿತ್ರದ ನಿರ್ಮಾಪಕರಾದ ಉಮಾಪತಿ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಹಾರೈಸುತ್ತಾ ಚಿತ್ರದ ಪೋಸ್ಟರ್ ನಿಮಗಾಗಿ ಬಿಡುಗಡೆ #RoberrtNewPoster @umap30071 @UmapathyFilms @TharunSudhir @StarAshaBhat pic.twitter.com/eCaQXltATR
— Darshan Thoogudeepa (@dasadarshan) July 27, 2020
ಉಮಾಪತಿ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದಲ್ಲಿ ರಾಬರ್ಟ್ ಚಿತ್ರ ಸಿದ್ಧವಾಗುತ್ತಿದೆ. ಮೊದಲ ಬಾರಿಗೆ ದರ್ಶನ್ ತ್ರಿಪಾತ್ರದಲ್ಲಿ ನಟಿಸುತ್ತಿರೋದರಿಂದ ಚಿತ್ರ ಹೆಚ್ಚು ಭರವಸೆಯನ್ನು ಮೂಡಿಸಿದೆ. ರಾಬರ್ಟ್ ಗೆ ಜೊತೆಯಾಗಿ ಆಶಾ ಭಟ್ ನಟಿಸುತ್ತಿದ್ದು, ಜಗಪತಿ ಬಾಬು, ರವಿ ಕಿಶನ್, ರವಿ ಶಂಕರ್, ದೇವರಾಜ್ ಸೇರಿದಂತೆ ದೊಡ್ಡ ತಾರಾಬಳಗವನ್ನ ಸಿನಿಮಾ ಹೊಂದಿದೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ.