ಕರ್ನೂಲ್: ಆಂಧ್ರದ ಕರ್ನೂಲಿನ 27 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ 4 ಖಾಸಗಿ ಶಾಲೆಗಳನ್ನು 10 ದಿನ ಬಂದ್ ಮಾಡಲಾಗಿದೆ.
ಶ್ರಿಶೈಲಂ ಮಂಡಲದ ಸುನ್ನಿಪೆಂಟಾ ಪ್ರದೇಶದ 4 ಶಾಲೆಗಳ 9-10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ 10 ದಿನ ಶಾಲೆಯನ್ನು ಮುಚ್ಚಿ ಸ್ಯಾನಿಟೈಸ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಪ್ರಕಟಿಸಿದ್ದಾರೆ.
Advertisement
Advertisement
ವಿದ್ಯಾರ್ಥಿಗಳು ಅಟೋ ರಿಕ್ಷಾದಲ್ಲಿ ಶಾಲೆಗೆ ಆಗಮಿಸುವ ವೇಳೆ ಸೋಂಕು ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 4 ಶಾಲೆಗಳ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಲಾಗಿದೆ.
Advertisement
ಈ ಬಗ್ಗೆ ಕರ್ನೂಲ್ ಜಿಲ್ಲಾ ಶಿಕ್ಷಣ ಅಧಿಕಾರಿ ಸಾಯಿರಾಮ್ ಪ್ರತಿಕ್ರಿಯಿಸಿ, ಪೋಷಕರ ಒಪ್ಪಿಗೆಯ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳ 25 -30 ಸಾವಿರ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Advertisement
ಕೇಂದ್ರ ಸರ್ಕಾರ ಅನ್‌ಲಾಕ್ ಮಾರ್ಗಸೂಚಿಯಂತೆ ಆಂಧ್ರ ಪ್ರದೇಶದಲ್ಲಿ 9, 10, ಪದವಿ ಪೂರ್ವ ತರಗತಿಗಳು ಸೆ. 21ರಿಂದ ಆರಂಭಗೊಂಡಿತ್ತು.