ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆದ ಚಿತ್ರರಂಗದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ಯನ್ನು ತಾವು ಮಾಡಿರುವುದು ಬಹಳ ಒಳ್ಳೆಯ ಕೆಲಸವೇ ಸರಿ, ಆದರೆ ಈ ಶ್ರದ್ಧಾಂಜಲಿ ಸಭೆಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಸಾವನ್ನಪ್ಪಿದ ಯುವನಾಯಕ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ ರವರ ಭಾವಚಿತ್ರವನ್ನು ಇಡಲು ತಾವು ತೋರಿಸಿರುವ ನಿರಾಸಕ್ತಿ ಇಡೀ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿರುತ್ತದೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಈ ನಡೆಯನ್ನು ವೀರಶೈವ ಲಿಂಗಾಯತ ಯುವ ವೇದಿಕೆ ಉಗ್ರವಾಗಿ ಖಂಡಿಸುತ್ತದೆ.
Advertisement
ಸಾವಿನಲ್ಲೂ ಜಾತಿ ಹುಡುಕುವ ಕೆಲಸವನ್ನು ಮಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧಿಕ್ಕಾರವಿರಲಿ. ಈ ಕೂಡಲೇ ಎಚ್ಚೆತ್ತುಕೊಂಡು ಯುವ ನಾಯಕ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಸಂಚಾರಿ ವಿಜಯರವರಿಗೆ ತೋರಿರುವ ಅಸಡ್ಡೆಯನ್ನು ತಿದ್ದಿಕೊಂಡು ಸರಿಪಡಿಸಬೇಕೆಂದು ಆಗ್ರಹಿಸುತ್ತೇವೆ.
Advertisement
Advertisement
ಇನ್ನು ಮುಂದಾದರೂ ಎಲ್ಲರನ್ನೂ ಸರಿಸಮವಾಗಿ ಕಾಣುವ ಬುದ್ಧಿಯನ್ನು ವಿಶ್ವಗುರು ಬಸವಣ್ಣನವರು ವಾಣಿಜ್ಯ ಮಂಡಳಿಯ ಆಡಳಿತ ನಡೆಸುವ ಪದಾಧಿಕಾರಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ
Advertisement