– ನೂತನ ಅಧ್ಯಕ್ಷರಾಗಿ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಆಯ್ಕೆ
ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕಾಸರಗೋಡು ಜಿಲ್ಲಾ ಘಟಕದ ಮಹಾಸಭೆ ಕಳೆದ ಭಾನುವಾರ ಕುಂಬಳೆಯ ಹೊಟೇಲ್ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಅಚ್ಯುತ ಚೇವಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಗಂಗಾಧರ್ ಯಾದವ್ ಸ್ವಾಗತಿಸಿ ಪ್ರಾಸ್ತಾಪಿಸಿದರು.
ಬಳಿಕ ನೂತನ ಪದಾಕಾರಿಗಳ ಆಯ್ಕೆ ನಡೆಸಲಾಗಿದ್ದು, ಅಬ್ದುಲ್‍ರಹಮಾನ್ ಸುಬ್ಬಯ್ಯಕಟ್ಟೆ ಅವರನ್ನು ಸರ್ವಾನುಮತದಿಂದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪುರುಷೋತ್ತಮ ಭಟ್ (ಉಪಾಧ್ಯಕ್ಷ), ಕೆ.ಗಂಗಾಧರ್ ಯಾದವ್ (ಪ್ರಧಾನ ಕಾರ್ಯದರ್ಶಿ), ಪುರುಷೋತ್ತಮ ಪೆರ್ಲ (ಕೋಶಾಧಿಕಾರಿ), ವಿವೇಕ್ ಆದಿತ್ಯಮತ್ತು ಸ್ಟೀಫನ್ ಕ್ರಾಸ್ತ ಜೊತೆ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ್ ಕುಮಾರ್ ಬೇಕಲ್, ಅಬ್ದುಲ್ ರಹಮಾನ್ ಉದ್ಯಾವರ, ರತನ್ ಹೊಸಂಗಡಿ, ರವಿ ನಾಯ್ಕಾಪು, ಜಗನ್ನಾಥ ಶೆಟ್ಟಿ ಹಾಗೂ ಆರಿಫ್ ಮಚ್ಚಂಪಾಡಿ ಆಯ್ಕೆಯಾದರು. ಕೇಂದ್ರ ಸಮಿತಿ ಪ್ರತಿನಿಧಿಯಾಗಿ ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್ ಅವರನ್ನು ಆಯ್ಕೆ ಮಾಡಲಾಯಿತು.