ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಆಗುತ್ತಾ ಈ ಪ್ರಶ್ನೆ ಈಗ ಮತ್ತೆ ಎದ್ದಿದೆ. ಈ ಪ್ರಶ್ನೆ ಈಗ ಏಳಲು ಕಾರಣ ಇಂದಿನ ಸರ್ವಪಕ್ಷ ಸಭೆ. ಈ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಲಾಕ್‌ಡೌನ್ ಪರವಾಗಿ ಒಲವು ತೋರಿಸಿದ ಹಿನ್ನೆಲೆಯಲ್ಲಿ ಮತ್ತೆ ಈ ವಿಚಾರ ಚರ್ಚೆಗೆ ಬಂದಿದೆ.
ಜೀವ ಉಳಿಸುವುದು ಮುಖ್ಯ, ಆರ್ಥಿಕ ಪರಿಸ್ಥಿತಿ ಲೆಕ್ಕ ಹಾಕಿದ್ರೆ ದೊಡ್ಡ ಆಪತ್ತು ಎದುರಾಗುತ್ತದೆ. ಕೂಡಲೇ ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಭಾಗಗಳಲ್ಲಿ ಲಾಕ್ ಡೌನ್ ಮಾಡಿ ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಕೋವಿಡ್ ತಾಂತ್ರಿಕ ಸಮಿತಿ ಸಲಹೆಯನ್ನು ಕಡೆಗಣಿಸಿದ್ದಕ್ಕೆ ಏನೆಲ್ಲಾ ಆಯ್ತು ನೋಡಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಸರ್ಕಾರದಲ್ಲಿ ಸಮನ್ವಯವೇ ಇಲ್ಲ.. ರಾತ್ರಿ ಕರ್ಫ್ಯೂ ನಿಂದ ಏನೇನೋ ಪ್ರಯೋಜನ ಆಗಿಲ್ಲ. ಹೆಲ್ತ್ ಎಮರ್ಜೆನ್ಸಿ ಘೋಷಿಸಿ. 144 ಸೆಕ್ಷನ್ ಜಾರಿ ಮಾಡಿ. ತಜ್ಞರ ಸಮಿತಿ ಲಾಕ್‌ಡೌನ್ ಮಾಡಿ ಅಂತಾ ಹೇಳಿದ್ರೆ ಲಾಕ್‌ಡೌನ್ ಮಾಡಿ ಎಂದು ಸಲಹೆ ಕೊಟ್ಟರು.
Advertisement
ಡಿ.ಕೆ.ಶಿವಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಾದ್ರೂ ಕ್ರಮ ತೆಗದುಕೊಳ್ಳಿ. ಮೊದಲು ಜೀವ ಇದ್ದರೆ ಜೀವನ ಎನ್ನುತ್ತಾ ಪರೋಕ್ಷವಾಗಿ ಲಾಕ್‌ಡೌನ್‌ಗೆ ಸಲಹೆ ನೀಡಿದರು. ಇದನ್ನೂ ಓದಿ: ಜೀವ ಮುಖ್ಯ, ಲಾಕ್‌ಡೌನ್ ಅನಿವಾರ್ಯ – ಎಚ್‌ಡಿ ಕುಮಾರಸ್ವಾಮಿ
Advertisement
ಬಿಜೆಪಿ ಅಧ್ಯಕ್ಷ ನಳಿನ್ ಕಟೀಲ್ ಮಾತನಾಡಿ, ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎನ್ನುತ್ತಲೇ, ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ ಸುಲಿಗೆ ಆಗ್ತಿದೆ. ಕಂಟ್ರೋಲ್ ಮಾಡಿ ಅಂತಾ ಒತ್ತಾಯಿಸಿದರು. ಜಿಲ್ಲೆಗಳಿಂದ ಜಿಲ್ಲೆಗಳಿಗೆ ಹೋಗುವಾಗ ಒಂದು ಟೆಸ್ಟ್ ಕಡ್ಡಾಯ ಮಾಡಿಸಿ ಅಂತಾ ಆಗ್ರಹಿಸಿದರು.
ಪರಿಷತ್ ವಿಪಕ್ಷ ನಾಯಕ ಎಸ್‌ಆರ್ ಪಾಟೀಲ್ ಮಾತನಾಡಿ, ಅಂತ್ಯಕ್ರಿಯೆ ಗೌರವಯುತವಾಗಿ ನಡೆಯುತ್ತಿಲ್ಲ. 30-40 ಸಾವಿರ ಕೇಳ್ತಿದ್ದಾರೆ ಎನ್ನುತ್ತಾ ಪಬ್ಲಿಕ್ ಟಿವಿ ವರದಿ ಪ್ರಸ್ತಾಪಿಸಿದ್ರು. ಲಾಕ್ ಡೌನ್ ಮಾಡಿದ್ರೆ ಮೊದಲು ಎಲ್ಲರಿಗೂ ಸೌಲಭ್ಯ ಕೊಡಬೇಕು ಅಂತಾ ಒತ್ತಾಯಿಸಿದರು.
ರಾಜಭವನದಿಂದ ರಾಜ್ಯಪಾಲ ವಿಆರ್ ವಾಲಾ, ಮಣಿಪಾಲ ಆಸ್ಪತ್ರೆಯಿಂದ ಸಿಎಂ ಬಿಎಸ್‌ವೈ, ಕೃಷ್ಣಾದಿಂದ ಅಶೋಕ್, ಸುಧಾಕರ್, ಬೊಮ್ಮಾಯಿ, ಕೆಪಿಸಿಸಿ ಕಚೇರಿಯಿಂದ ಡಿಕೆಶಿ, ಅಪೋಲೋ ಆಸ್ಪತ್ರೆಯಿಂದ ಎಚ್‌ಡಿ ಕುಮಾರಸ್ವಾಮಿ, ಕುಮಾರಕೃಪಾ ನಿವಾಸದಿಂದ ಸಿದ್ದರಾಮಯ್ಯ, ಹಾಸನದಿಂದ ಹೆಚ್ ಡಿ ರೇವಣ್ಣ, ಮಂಗಳೂರಿನಿಂದ ಕಟೀಲ್ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು.