Connect with us

ಜೀವ ಮುಖ್ಯ, ಲಾಕ್‌ಡೌನ್ ಅನಿವಾರ್ಯ – ಎಚ್‌ಡಿ ಕುಮಾರಸ್ವಾಮಿ

ಜೀವ ಮುಖ್ಯ, ಲಾಕ್‌ಡೌನ್ ಅನಿವಾರ್ಯ – ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ಕಳೆದ ಬಾರಿ ಲಾಕ್‌ಡೌನ್‌ನಿಂದ ಕೊರೊನಾ ಸ್ವಲ್ಪ ನಿಯಂತ್ರಣಕ್ಕೆ ಬಂದಿತ್ತು. ಹೀಗಾಗಿ ಮತ್ತೊಮ್ಮೆ ಲಾಕ್‌ಡೌನ್ ಮಾಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ  ಆಗ್ರಹಿಸಿದ್ದಾರೆ.

ರಾಜ್ಯಪಾಲರ ಜೊತೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಜೀವ ಉಳಿಸುವುದು ಮುಖ್ಯವಾಗಿದ್ದು, ಸರ್ಕಾರ ಬಗ್ಗೆ ನಾನು ದೂರಲು ಹೋಗುವುದಿಲ್ಲ. ಈ ಹಿಂದೆಯೇ ಲಾಕ್‌ಡೌನ್ ಮಾಡಿ ಎಂದಿದ್ದೆ. ಈಗಲೂ ಸಹ ಲಾಕ್‌ಡೌನ್ ಮಾಡಿ ಎಂದೇ ಹೇಳುತ್ತಿದ್ದೇನೆ ಎಂದರು.

ಆರ್ಥಿಕ ಪರಿಸ್ಥಿತಿಯನ್ನ ನೋಡಿಕೊಂಡು ಕುಳಿತರೆ ಮುಂದೆ ನಮಗೆ ಕಷ್ಟ. ಕೊರೊನಾ ಹೆಚ್ಚಿರುವ ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಭಾಗಗಳಲ್ಲಿ ಲಾಕ್‌ಡೌನ್ ಅನಿವಾರ್ಯ. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ. ಮುಖ್ಯಮಂತ್ರಿಗಳ ಜೊತೆ ನಾವಿದ್ದೇವೆ. ಇವತ್ತಿನಿಂದಲೇ ಲಾಕ್‌ಡೌನ್ ಮಾಡಿ ಎಂದು ಎಂದು ರಾಜ್ಯಪಾಲರ ಮುಂದೆ ಮನವಿ ಮಾಡಿದರು.

ರಾಜಭವನದಿಂದ ರಾಜ್ಯಪಾಲ ವಿಆರ್ ವಾಲಾ, ಮಣಿಪಾಲ ಆಸ್ಪತ್ರೆಯಿಂದ ಸಿಎಂ ಬಿಎಸ್‌ವೈ, ಕೃಷ್ಣಾದಿಂದ ಅಶೋಕ್, ಸುಧಾಕರ್, ಬೊಮ್ಮಾಯಿ, ಕೆಪಿಸಿಸಿ ಕಚೇರಿಯಿಂದ ಡಿಕೆಶಿ, ಅಪೋಲೋ ಆಸ್ಪತ್ರೆಯಿಂದ ಎಚ್‌ಡಿ ಕುಮಾರಸ್ವಾಮಿ, ಕುಮಾರಕೃಪಾ ನಿವಾಸದಿಂದ ಸಿದ್ದರಾಮಯ್ಯ, ಹಾಸನದಿಂದ ಹೆಚ್ ಡಿ ರೇವಣ್ಣ, ಮಂಗಳೂರಿನಿಂದ ಕಟೀಲ್ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು.

Advertisement
Advertisement
Advertisement