– ಸೋಮವಾರ ಸರ್ಕಾರ ಘೋಷಿಸುತ್ತಾ ಟಫ್ ರೂಲ್ಸ್?
– ಸರ್ಕಾರದಲ್ಲಿ ಮುಂದುವರಿದ ಗೊಂದಲ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಬಲವಾಗುತ್ತಿದೆ. ಕಳೆದ ಐದು ದಿನಗಳಿಂದಲೂ ಒಂದೂವರೆ ಸಾವಿರಕ್ಕೂ ಹೆಚ್ಚು ಪಾಸಿಟಿವ್ ವರದಿಗಳು ರಿಪೋರ್ಟ್ ಆಗ್ತಿವೆ. ಇಂದು 1,715 ಮಂದಿಗೆ ಸೋಂಕು ಹಾಗೂ 2 ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್‍ಡೌನ್ ಬದಲಿಗೆ 2 ವಾರಗಳ ಮಟ್ಟಿಗೆ ಸೆಮಿ ಲಾಕ್‍ಡೌನ್ ಹೇರಲು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
Advertisement
ಈ ಕುರಿತಂತೆ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಿರಿಯ ಸಚಿವರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಇನ್ನು ತಾಂತ್ರಿಕ ಸಲಹಾ ಸಮಿತಿ ಕೆಲ ಸಲಹೆಗಳು ಸರ್ಕಾರಕ್ಕೆ ನೀಡಿದೆ.
Advertisement
Advertisement
ಲಾಕ್ ಅಲ್ಲ; ಸೆಮಿ ಲಾಕ್, ತಜ್ಞರ ಸಲಹೆ ಏನು?: ರಾಜ್ಯದಲ್ಲಿ ಜಾತ್ರೆ, ಸಾರ್ವಜನಿಕ ಸಭೆ-ಸಮಾರಂಭಗಳನ್ನು ಸಂಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸುವುದು. ಈಜುಕೊಳ, ಪಾರ್ಕ್, ಜಿಮ್‍ಗಳನ್ನು ಬಂದ್ ಮಾಡಬೇಕು. ಶಾಲೆ-ಕಾಲೇಜುಗಳ ಬಗ್ಗೆ ಮರು ಯೋಚನೆ ಮಾಡಿ. ಮದುವೆ ಕಾರ್ಯಕ್ರಮಗಳಿಗೆ 100 ಜನರಿಗಷ್ಟೇ ಅವಕಾಶ ನೀಡಬೇಕು. ಹೊರಾಂಗಣ ಕಾರ್ಯಕ್ರಮಕ್ಕೆ 200 ಜನರಿಗಷ್ಟೇ ಅವಕಾಶ ಮತ್ತು ಥಿಯೇಟರ್ ನಲ್ಲಿ ಶೇ.50ರಷ್ಟು ಭರ್ತಿಗಷ್ಟೇ ಅವಕಾಶ ನೀಡಬೇಕು. ಮಾಲ್, ಮಾರುಕಟ್ಟೆ, ದೇವಾಲಯಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು.
Advertisement
ಸರ್ಕಾರದಲ್ಲಿ ಗೊಂದಲ: ತಾಂತ್ರಿಕ ಸಲಹಾ ಸಮಿತಿ ಒಂದ್ಕಡೆ 2 ವಾರಗಳ ಮಟ್ಟಿಗೆ ಸೆಮಿ ಲಾಕ್‍ಡೌನ್ ರೀತಿ ಕಠಿಣ ನಿಯಮಗಳ ಜಾರಿಗೆ ಸಲಹೆ ನೀಡುತ್ತಿದ್ರೆ, ಮತ್ತೊಂದ್ಕಡೆ ಸರ್ಕಾರ ಮಟ್ಟದಲ್ಲಿ ಮತ್ತೆ ಗೌಜು ಗೊಂದಲ ಮುಂದುವರಿದಿದೆ. ಕಂದಾಯ ಸಚಿವ ಅಶೋಕ್ ಮಾತನಾಡಿ, ಅರೆ ಲಾಕ್‍ಡೌನ್, ನೈಟ್‍ಕರ್ಫ್ಯೂ ಪ್ರಸ್ತಾಪ ಇಲ್ಲ. 10 ದಿನ ಕಾದು ನೋಡೋಣ. ಆದರೆ ಒಳಾಂಗಣ ಕಾರ್ಯಕ್ರಮಗಳಿಂದಷ್ಟೇ ಕೊರೊನಾ ಬೇಗ ಹಬ್ಬುತ್ತೆ. ಹಾಗಾಗಿ, ಮದುವೆ, ಥಿಯೇಟರ್ ಗಳ ಮೇಲೆ ನಿಗಾ ಇರಬೇಕು ಅಂದಿದ್ದಾರೆ. ಸಚಿವ ಆರ್. ಶಂಕರ್, ಲಾಕ್‍ಡೌನ್ ಬಗ್ಗೆ ಸದ್ಯಕ್ಕೆ ಯೋಚನೆಗಳು ನಡೀತಿವೆ. ಕೊರೋನಾ ಹೆಚ್ಚಾದಾಗ ಲಾಕ್‍ಡೌನ್ ಮಾಡುವ ಅನಿವಾರ್ಯತೆ ಇರುತ್ತೆ. ಮುಖ್ಯಮಂತ್ರಿಗಳು, ಆರೋಗ್ಯಮಂತ್ರಿಗಳು ಆ ಬಗ್ಗೆ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯಿಸಿ, ತಜ್ಞರ ಸಲಹೆ ಬಗ್ಗೆ ಇವತ್ತೇ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಕೊರೊನಾ 2ನೇ ಅಲೆ ಆರಂಭದಲ್ಲಿ ಇದ್ದೇವೆ. ಸಲಹಾ ಸಮಿತಿ ಸಲಹೆ ಪಾಲನೆಗೆ ಮುಂದಾಗುತ್ತೇವೆ. ಕೊರೊನಾ ಯಾವುದಕ್ಕೂ ರಿಯಾಯಿತಿ ಕೊಡಲ್ಲ. ತಜ್ಞರ ಸಲಹೆ ಬಗ್ಗೆ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಶಾಲಾ-ಕಾಲೇಜುಗಳ ಕಥೆ ಏನು?: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜ್‍ಗಳ ಕಥೆ ಏನು? ಅನ್ನೋದು ವ್ಯಾಪಕ ಚರ್ಚೆ ಆಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಸದ್ಯಕ್ಕೆ ಶಾಲಾ-ಕಾಲೇಜ್ ಬಂದ್ ಮಾಡೋ ಅವಶ್ಯಕತೆ ಇಲ್ಲ. ಕೊರೊನಾ ಜೊತೆ ಬದುಕೋದು ಕಲಿಯಬೇಕು. ಕೊರೊನಾ ಹಬ್ಬದಂತೆ ನಾವೆಲ್ಲಾ ಮತ್ತಷ್ಟು ಮಗದಷ್ಟು ಎಚ್ಚರಿಕೆ ವಹಿಸಬೇಕು ಅಂತ ಹೇಳಿದ್ದರು.
ಮಾರ್ಚ್ ನಲ್ಲಿ ಕೊರೊನಾ ದುಪ್ಪಟ್ಟು ಆಗುತ್ತಿರೋ ಕಾರಣ, ಶಾಲಾ-ಕಾಲೇಜ್ ಬಂದ್ ಬಗ್ಗೆಯೂ ಗಂಭೀರ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೋವಿಡ್ ಟೆಕ್ನಿಕಲ್ ಕಮಿಟಿ ಕೂಡ ಶಾಲಾ-ಕಾಲೇಜ್‍ಗೆ ಬಂದ್ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
ಮಾರ್ಚ್ ಅಂತ್ಯಕ್ಕೆ ಕೊರೊನಾ ಮಹಾಸ್ಫೋಟ?: ಕರ್ನಾಟಕದಲ್ಲಿ ಕೊರೊನಾ ಬ್ರೇಕ್ ಫೇಲ್ ಆಗೋಗಿದೆ. ಕೊರೊನಾ 2ನೇ ಸುನಾಮಿ ಅಲೆ ಅಬ್ಬರಿಸ್ತಿದೆ. ಮಾರ್ಚ್ ಅಂತ್ಯಕ್ಕೆ ಕೊರೊನಾ ಮಹಾಸ್ಫೋಟವಾಗುತ್ತೆ ಅಂತ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇದನ್ನು ಆರೋಗ್ಯ ಸಚಿವ ಸುಧಾಕರ್ ಕೂಡ ಒಪ್ಪಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಹೆಜ್ಜೆ ಮುಂದೋಗಿ ಇನ್ನೂ 3 ತಿಂಗಳು ಕೊರೊನಾ ನಿರಂತರವಾಗಿ ಏರಿಕೆ ಆಗಲಿದೆ. ಒಮ್ಮೆ ಕೊರೊನಾ ಪೀಕ್‍ಗೆ ಹೋದರೆ ಮುಂದಿನ 3 ತಿಂಗಳು ಕಡಿಮೆ ಆಗಲ್ಲ. ಕೊರೊನಾ ಕೇಸ್ ಹೆಚ್ಚಳ ಆಗ್ತಿದೆ, ಹೀಗಾಗಿ ಎಚ್ಚರವಹಿಸಬೇಕು ಅಂತ ಸುಧಾಕರ್ ಹೇಳಿದ್ದಾರೆ.
ಇದರ ಮಧ್ಯೆ, ನಂದಿ ಹಿಲ್ಸ್, ಸಿನಿಮಾ ಥಿಯೇಟರ್ ಟ್ರಾವೆಲ್ ಹಿಸ್ಟರಿ ಇರುವ ಕಣ್ಣೂರಿನ ಒಂದೇ ಕುಟುಂಬದ 7 ಜನರಿಗೆ ಪಾಸಿಟಿವ್ ಆಗಿದೆ. 18 ಜನ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ಮತ್ತೊಂದು ಕಡೆ, ಬೆಂಗಳೂರು ರೌಂಡ್ ಹಾಕಿದ್ದ ಹೆಬ್ಬಗೋಡಿಯ ಒಂದೇ ಕುಟುಂಬದ ಐವರಿಗೆ ಸೋಂಕು ತಗಲಿದೆ.