ಬಿಗ್‍ಬಾಸ್ ಮನೆ ಎಂಟ್ರಿಕೊಟ್ಟಿರುವ ಸ್ಪರ್ಧಿಗಳು ಮೊದಲ ಇನ್ನಿಂಗ್ಸ್‍ನಿಂದ ಮನೆಯಿಂದ ಹೊರಹೋದ ಮೇಲೆ ಏನಾಯಿತ್ತು ಎಂಬುವುದರ ಕುರಿತು ಮೆಲುಕು ಹಾಕುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಕಥೆಯನ್ನು ಬಿಚ್ಚಿಡುವಾಗ ಮಂಜು ಮಾತ್ರ ಸಖತ್ ಇಂಟ್ರೇಸ್ಟಿಂಗ್ ಸ್ಟೋರಿಯೊಂದನ್ನು ಹೇಳಿದ್ದಾರೆ.
ಒಂದು ದಿನ ಒಂದು ಕರೆ ಬಂದಿತ್ತು. ಆ ವ್ಯಕ್ತಿ 30-35 ಬಾರಿ ಕರೆ ಮಾಡಿದ್ದರು. ಆದರೆ ನಾನು ಕಾಲ್ ಎತ್ತಿರಲಿಲ್ಲ. ಯಾವುದೋ ಫ್ಯಾನ್ ವೂಟ್‍ನಲ್ಲಿ ಬಿಗ್‍ಬಾಸ್ ಸಾಕಷ್ಟು ಬಾರಿ ನೋಡಿದ್ದಾನೆ. ಈಗ ಕರೆ ಮಾಡಿ ಆ ಬಗ್ಗೆ ಕೇಳುತ್ತಾನೆ ಎಂದು ಭಾವಿಸಿ ಕಾಲ್ ಪಿಕ್ ಮಾಡಿ ಮಾತನಾಡಿದಾಗ ನನಗೆ ತುಂಬಾ ಆಶ್ಚರ್ಯವಾಯಿತು.
ಕಾಲ್ ಮಾಡಿದ ವ್ಯಕ್ತಿ, ನೀವು ಮಂಜು ಪಾವಗಡ ಅವರ ಎಂದು ಕೇಳಿದರು. ನಾನು ಹೌದು ಎಂದೆ. ಚೆನ್ನಾಗಿದ್ದೀರಾ ನೀವು ಚೆನ್ನಾಗಿ ಆ್ಯಕ್ಟ್ ಮಾಡ್ತೀರಾ. ಆದರೆ ಎರಡೂವರೆ ತಿಂಗಳಿಂದ ಮಜಾ ಭಾರತದಲ್ಲಿ ಕಾಣುತ್ತಿಲ್ಲ, ಎಲ್ಲೋದ್ರಿ ಎಂದು ಕೇಳಿದ್ರು. ನನಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ ಎಂದರು. ಅಂದ್ರೆ ಅವನು ಬಿಗ್‍ಬಾಸ್ ನೋಡೆ ಇಲ್ಲವಾ..? ಈ ವಿಚಾರ ಕೇಳಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕರು. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಇಂಗ್ಲಿಷ್ ಪರೀಕ್ಷೆಯಲ್ಲಿನ ಮಂಜು ಸ್ಕೋರ್ ರಿವೀಲ್
ಕನ್ನಡ ಬಿಗ್‍ಬಾಸ್ ಮನೆಯ ಮೊದಲ ಇನ್ನಿಂಗ್ಸ್‍ನಲ್ಲಿ ಮಂಜು ಪಾವಗಡ ಸಾಕಷ್ಟು ಎಂಟರ್ ಟೈನ್ಮೆಂಟ್ ನೀಡಿದ್ದರು. ಆದರೆ ಕೊನೆಯಲ್ಲಿ ಅವರು ಡಲ್ ಆಗಿದ್ದರು, ಒಬ್ಬರಿಗೆ ಹೆಚ್ಚು ಸಮಯವನ್ನೂ ಕಳೆಯುತ್ತಿದ್ದಾರೆ. ಮಂಜು ಆಟ ಬೇಸರ ತರಿಸುತ್ತಿದೆ ಎಂದೆಲ್ಲಾ ಈ ಬಗ್ಗೆ ವೀಕ್ಷಕರು ಸಾಕಷ್ಟು ಬೇಸರ ಹೊರ ಹಾಕಿದ್ದರು. ಈ ಬಾರಿ ಹೇಗೆ ಆಟ ಆಡಲಿದ್ದಾರೆ? ಏನೆಲ್ಲಾ ಮಸಾಲೆ ಭರಿತವಾದ ಆಟ ಇರಲಿದೆ. ಮಂಜು ಹೇಗೆ ತಮ್ಮ ಆಟವನ್ನು ಆಡಲಿದ್ದಾರೆ ಎನ್ನುವುದನ್ನು ನೋಡುವುದಕ್ಕೆ ಬಿಗ್‍ಬಾಸ್ ವೀಕ್ಷಕರು ಕಾಯುತ್ತಿರುವುದಂತು ಖಂಡಿತ ಹೌದು.