ಬೆಂಗಳೂರು: ಸಿನಿಮಾ ಲೋಕಕ್ಕೆ ಭಾನುವಾರ ಸತತವಾಗಿ ಶಾಕ್ ನೀಡುತ್ತಿದೆ. ಕಳೆದ ಭಾನುವಾರ ಸ್ಯಾಂಡಲ್‍ವುಡ್‍ನ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೀಡಾದ್ರು. ಈ ಭಾನುವಾರ ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿದ್ದಾರೆ. ಜೂನ್ 1ರಂದು ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ಅವರನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದುಕೊಂಡಿದೆ.
Advertisement
ಜೂನ್ 1: ಬಾಲಿವುಡ್ ಫೇಮಸ್ ಸಂಗೀತ ನಿರ್ದೇಶಕ ಜೋಡಿಗಳಲ್ಲಿ ಒಂದು ಸಾಜಿದ್ ಮತ್ತು ವಾಜಿದ್. ಈ ಜೋಡಿಯಲ್ಲಿ ಮೂಡಿ ಬಂದ ಹಾಡುಗಳು ಇಂದಿಗೂ ಎವರ್ ಗ್ರೀನ್. ಈ ಜೋಡಿಯನ್ನು ಹೆಮ್ಮಾರಿ ಕೊರೊನಾ ಬೇರೆ ಮಾಡಿತ್ತು. ಕೊರೊನಾ ಸೋಂಕಿಗೆ ತುತ್ತಾಗಿದ್ದ ವಾಜಿದ್ ಖಾನ್ ಚಿಕಿತ್ಸೆ ಫಲಕಾರಿಯಾಗದೇ ಜೂನ್ 1ರಂದು ಭಾನುವಾರ ನಿಧನರಾಗಿದ್ದರು. ಕೊರೊನಾ ಸೋಂಕಿಗೆ ಒಳಗಾಗಿದ್ದರಿಂದ ವಾಜಿದ್ ಮೃತದೇಹವನ್ನು ಕುಟುಂಬಸ್ಥರಿಗೆ ಅಧಿಕಾರಿಗಳು ನೀಡದೇ, ಕೋವಿಡ್ 19 ನಿಯಮಗಳನ್ವಯ ಅಂತ್ಯಕ್ರಿಯೆ ಮಾಡಿದ್ದರು.
Advertisement
Advertisement
ಜೂನ್ 7: ಚಂದನವನದ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಭಾನುವಾರ ಸಾವನ್ನಪ್ಪಿದ್ದರು. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಚಿರಂಜೀವಿ ಜೂನ್ 14ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಸುಮಾರು 4 ಗಂಟೆಗೆ ಚಿರಂಜೀವಿ ಸರ್ಜಾ ನಿಧನ ಹೊಂದಿದ್ದರು.
Advertisement
ಜೂನ್ 14: ತನ್ನ ಶ್ರಮದಿಂದಲೇ ಟಾಪ್ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ರಿಕೆಟ್ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಿನಿಮಾ ಬಳಿಕ ಸುಶಾಂತ್ ಬಾಲಿವುಡ್ ನಲ್ಲಿ ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದರು. ವರದಿಗಳ ಪ್ರಕಾರ ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಒಟ್ಟಿನಲ್ಲಿ ಕಳೆದ 15 ದಿನಗಳಲ್ಲಿ ಭಾರತೀಯ ಚಿತ್ರರಂಗ ಮೂರು ತಾರೆಗಳನ್ನು ಕಳೆದುಕೊಂಡಿದೆ. 34 ವರ್ಷದ ಸುಶಾಂತ್, 39 ವರ್ಷದ ಚಿರಂಜೀವಿ ಸರ್ಜಾ ಸಾವು ಅಭಿಮಾನಿಗಳಿಗೆ ದೊಡ್ಡ ಮಟ್ಟದ ಶಾಕ್ ನೀಡಿದೆ.