ಬೆಂಗಳೂರು: ಕನ್ನಡ ಚಿತ್ರರಂಗ ಕಳಪೆ ಎಂದು ಟ್ವೀಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ನಟ ಚೇತನ್‍ರವರು ಬೆಂಬಲ ನೀಡಿದ್ದರೆ, ನಟ ರಕ್ಷಿತ್ ಖಡಕ್ ಉತ್ತರ ನೀಡಿದ್ದಾರೆ.
Advertisement
Advertisement
ದಕ್ಷಿಣ ಭಾರತದ ಕೆಟ್ಟ ಚಿತ್ರೋದ್ಯಮ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಭರವಸೆ ಮೂಡಿದೆ. ಮರುಭೂಮಿಯಂತಿರುವ ಕನ್ನಡ ಚಿತ್ರರಂಗದಲ್ಲಿ ಚೇತನ್ ಅಹಿಂಸಾರವರು ಮಳೆಯಂತಿದ್ದಾರೆ ಎಂದು ವ್ಯಕ್ತಿ ಟ್ವೀಟ್ ಮಾಡಿದ್ದರು.
Advertisement
The worst film industry in south india finally has some hope. Chetan Ahimsa is a much needed rainstorm in that dry place called Kannada cinemahttps://t.co/QvM5iP2Ecx
— Sudipto Mondal (@mondalsudipto) June 12, 2021
Advertisement
ಇದಕ್ಕೆ ನಟ ಚೇತನ್ ಅಹಿಂಸಾರವರು ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದ. ಬೇರೆ ಸಿನಿಮಾಗಳಂತೆ ಕೆಜಿಎಫ್ ತರಹದ ಅನೇಕ ಉತ್ತಮ ಸಿನಿಮಾಗಳನ್ನು ನಾವು ಮಾಡಿದ್ದೇವೆ. ನೀವು ಆಡಿದ ಮಾತು ಕಟುವಾಗಿದ್ದರೂ ಅದನ್ನು ರಚನಾತ್ಮಕ ಪ್ರತಿಕ್ರಿಯೆ ಎಂದು ಪರಿಗಣಿಸುತ್ತೇವೆ ಎಂದು ರೀ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಜನ್ರಿಗೆ ಒಳ್ಳೆಯದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್
Thank u for appreciative words about me. I respect ur pro-equality journalism
As for KFI we have made many great film in the past & are presently evolving in terms of content/structural reforms just like other industries
We take ur words— though harsh— as constructive feedback https://t.co/awpKOhZP7T
— Chetan Kumar / ಚೇತನ್ (@ChetanAhimsa) June 13, 2021
ಈ ಎರಡು ಟ್ವೀಟ್‍ಗಳನ್ನು ಗಮನಿಸಿದ ರಕ್ಷಿತ್ ಶೆಟ್ಟಿ, ಈ ಚಿತ್ರರಂಗ ನನಗೆ ಹಾಗೂ ಅನೇಕರಿಗೆ ಒಂದು ವೇದಿಕೆ ನೀಡಿದೆ. ಈ ವೇದಿಕೆಯನ್ನು ನನಗಿಂತ ಮುನ್ನ ಅನೇಕ ದಿಗ್ಗಜರು ಕಟ್ಟಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ ಎಂಬುವುದು ನನಗೆ ಗೊತ್ತಿದೆ. ಏನೂ ಇಲ್ಲವಾಗಿದ್ದಾಗ ನನಗೆ ಈ ಚಿತ್ರರಂಗ ಜೀವನ ನೀಡಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನಕ್ಕೆ ಜೀವನ ನೀಡಿದೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?
This film Industry in the south has given me platform to express myself and to many many more. A platform built by many legends before me, whom I am sure you aren’t aware of. It has made my life from nothing to what I am today. It is life for thousands who work here. https://t.co/IfWOLzTNDV
— Rakshit Shetty (@rakshitshetty) June 13, 2021
ಚೇತನ್‍ರವರೇ ನಿಮ್ಮ ಕೆಲಸಗಳಿಂದ ನಾನು ನಿಮ್ಮನ್ನು ಗೌರವಿಸುತ್ತೇನೆ. ಆದರೆ ನೀವು ನಿಮ್ಮ ಆಲೋಚನೆಗಳನ್ನು ಸರಿಮಾಡಿಕೊಳ್ಳಬೇಕು. ಕೆಟ್ಟದ್ದನ್ನು ಬಿತ್ತಿದ ಕಡೆ ಕೆಡುಕು ಬೆಳೆಯುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿ ಹೇಳಿದ್ದಾರೆ.
With all due respect to @ChetanAhimsa whom we admire for the work he does… but you sir, you have to clean up your mental space… for the ‘worst’ lies where worse is sowed… all the best with that ????
— Rakshit Shetty (@rakshitshetty) June 13, 2021