ಬೆಂಗಳೂರು: ದಾಸ ಸಾಹಿತ್ಯದ ಸುವರ್ಣ ಯುಗದ ಪ್ರವರ್ಧಕರು ಕನಕರು. ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳನ್ನು ಹಾಡದ ಗಾಯಕರು ಇಲ್ಲ. ಕನಕರ ಸರಳತೆ, ಜಾತ್ಯಾತೀತತೆ ಸರ್ವಕಾಲಕ್ಕೂ ಆದರ್ಶವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 533 ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ವರಕವಿಗಳು, ಸಂತರು ದಾಸ ಶ್ರೇಷ್ಠ ಕನಕದಾಸರು ಹುಟ್ಟಿದೆ ದಿನ ಇದು. ಸರ್ಕಾರದ ವತಿಯಿಂದ ಕನಕದಾಸರ ಜಯಂತಿಯನ್ನು ಅಚರಿಸಿ ಸಾಧಕರಿಗೆ ಕನಕರ ಪ್ರಶಸ್ತಿ ನೀಡಲಾಗುತ್ತಿದೆ. ಸರ್ವ ಜನಾಂಗದ ಅಭಿವೃದ್ಧಿಗೆ ನಾವು ಸಮಾನ ಅನುದಾನ ನೀಡಿದ್ದೇವೆ. ಇವತ್ತಿನ ಯುವ ಜನಕ್ಕೆ ಕನಕದಾಸರ ವಿಚಾರಗಳನ್ನು ತಿಳಿಸುವ ಅಗತ್ಯ ಇದೆ. ಕನಕದಾಸರ ಹಾದಿಯಲ್ಲಿ ನಾವು ನಡೆಯಬೇಕಾಗಿದೆ ಎಂದು ಅಭಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಮಾತನಾಡಿದ ಕನಕಗುರು ಪೀಠದ ಶ್ರೀಸಿದ್ದರಾಮಾನಂದಪುರಿ ಸ್ವಾಮೀಜಿ ದಾಸನಾಗು, ವಿಶೇಷನಾಗು, ಭವಪಾಶ ನೀಗು ಎಂದು ಸಂತಶ್ರೇಷ್ಠ ಕನಕದಾಸರು ಹೇಳಿದ್ದಾರೆ. ರೇವಣಸಿದ್ದೇಶ್ವರನಿಂದ ವೀರಶೈವ ಪರಂಪರೆ ಆರಂಭವಾಗಿದೆ. ರೇವಣಸಿದ್ದೇಶ್ವರನನ್ನು ರೇಣುಕಾಚಾರ್ಯ ಎಂದು ಕರೆಯುತ್ತಾರೆ. ಕನಕದಾಸರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯಬೇಕಿದೆ. ಕನಕ ಒಬ್ಬ ಮಾಂಡಲಿಕ ಅರಸನಾಗಿದ್ದ. ಕನಕದಾಸರು ದೋಅಬ್ ಪ್ರದೇಶದಲ್ಲಿ ಸ್ವತಃ ರಾಜನಿಂದ ಮೋಸಕ್ಕೆ ಒಳಗಾಗುತ್ತಾನೆ. ನಂತರ ಮಾಂಡಲಿಕ ಸ್ಥಾನ ತ್ಯಾಗ ಮಾಡುತ್ತಾರೆ. ಕನಕದಾಸರಿಗೆ ಯಾರೂ ಕೂಡ ಧೀಕ್ಷೆ ನೀಡಿಲ್ಲ. ಕೃಷ್ಣನೇ ಅವರಿಗೆ ಧೀಕ್ಷೆ ಕೊಟ್ಟಿದ್ದಾರೆ.ಅವರಿವರು ಧೀಕ್ಷೆ ಕೊಟ್ಟಿದ್ದಾರೆ ಎಂಬುದು ಸುಳ್ಳು.ಅವರ ಸಾಹಿತ್ಯದಲ್ಲೂ ಅದು ಬಿಂಬಿತವಾಗಿದೆ ಎಂದಿದ್ದಾರೆ.
Advertisement
Advertisement
ಕನಕರು ವೈಷ್ಣವಾತೀತರು, ಶೈವಾತೀತರು. ಕನಕದಾಸ ಜಯಂತಿಯ ದಿನ ರಜೆ ಬೇಡ. ಅಧಿಕಾರಿಗಳು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಅಧಿಕಾರಿಗಳಿಗಾದರೂ ಕನಕದಾಸರ ಬಗ್ಗೆ ಗೊತ್ತಾಗಬೇಕು. ದೇಶದಲ್ಲಿ ರೈತರು ಹೋರಾಟಕ್ಕೆ ಇಳಿದಿದ್ದಾರೆ.ಸರ್ಕಾರಗಳು ಬಡವರ ಪರ ಇರಬೇಕು. ತುಳಿತಕ್ಕೆ ಒಳಗಾದವರ ಪರ ಇರಬೇಕು. ಯಡಿಯೂರಪ್ಪ ಮುಖ್ಯಮಂತ್ರಿಗಳು ಈ ಹಿಂದೆ ಹಲವು ಒಳ್ಳೆಯ ಕೆಲಸ ಮಾಡಿದ್ದಾರೆ. ಇತ್ತೀಚಿನ ಕೆಲವು ಘಟನೆಗಳು ನಮಗೆ ಬೇಸರ ತಂದಿವೆ. ಹಣ ಬಲ ತೋಲ್ಬಳ ಅಭಿವೃದ್ಧಿ ಹೊಂದಿದವರ ಪರ ನಿರ್ಧಾರ ಬೇಡ. ಆರ್ಥಿಕ ಶೈಕ್ಷಣಿಕ ಹಿಂದುಳಿದವರ ಪರ ಕೆಲಸ ಆಗಲಿ ಎಂದು ಶ್ರೀಗಳು ಸಲಹೆ ನೀಡಿದರು.
ಕನಕ ಶ್ರೀ ಪ್ರಶಸ್ತಿ 2020- ಶ್ರೀ ಯುಗಧರ್ಮ ರಾಮಣ್ಣ.(ದಾವಣಗೆರೆ) ಕನಕ ಗೌರವ ಪುರಸ್ಕಾರ 2019- ಪ್ರೊ.ಬಿ. ಶಿವರಾಮ ಶೆಟ್ಟಿ (ಮಂಗಳೂರು) ಕನಕ ಗೌರವ ಪುರಸ್ಕಾರ 2020- ಡಾ.ಶಶಿಧರ ಜಿ ವೈದ್ಯ, (ಹಾವೇರಿ) ಕನಕ ಯುವ ಪುರಸ್ಕಾರ 2019- ಡಾ.ಕಾತ್ಯಾಯಿನಿ ಕುಂಜಿಬೆಟ್ಟು( ಉಡುಪಿ) ಕನಕ ಪುರಸ್ಕಾರ 2020- ಡಾ.ನರಸಿಂಹಮೂರ್ತಿ ಹೂವಿನಹಳ್ಳಿ ಅವರಿಗೆ ಈ ವೇಳೆ ಗೌರವಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಶ್ರೀ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ, ಮಾಜಿ ಸಚಿವರಾದ ಶ್ರೀ ಹೆಚ್.ಎಂ.ರೇವಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ನವರಿಗೆ ಕುರುಬ ಸಂಪ್ರದಾಯದಂತೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು. ದಿವ್ಯ ಸಾನ್ನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ ಬ್ರಿಜ್ ಶಾಖಾಮಠದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿ ಭಾಗವಹಿಸಿದ್ದರು.