ಬಳ್ಳಾರಿ: ಕಟ್ಟಿಗೆ ಸಾಮಿಲ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಪರಿಕರಗಳು ಸುಟ್ಟು ಭಸ್ಮವಾಗಿರುವ ಘಟನೆ ಬಳ್ಳಾರಿಯ ಮಿಲ್ಲರ್ ಪೇಟೆ ವ್ಯಾಪ್ತಿಯ ಕಣೇಕಲ್ ಬಸ್ ನಿಲ್ದಾಣದ ಬಳಿಯಿರುವ ಕಟ್ಟಿಗೆ ಸಾಮಿಲ್‍ವೊಂದರಲ್ಲಿ ನಡೆದಿದೆ.
ಕಟ್ಟಿಗೆ ಸಾಮಿಲ್‍ಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಟ್ಟಿಗೆ ಪರಿಕರಗಳು ಸುಟ್ಟು ಭಸ್ಮವಾಗಿವೆ. ಘಟನೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.
ಕಟ್ಟಿಗೆ ಸಾಮಿಲ್‍ಗೆ ತಗುಲಿದ ಬೆಂಕಿ ಪಕ್ಕದ ಜೀನ್ಸ್ ಗಾಮೆರ್ಂಟ್ಸ್ ಗೋದಾಮುಗೆ ವ್ಯಾಪಿಸಿ, ಜೀನ್ಸ್ ಗೋದಾಮಿನಲ್ಲಿದ್ದ ಜೀನ್ಸ್ ಬಟ್ಟಗಳ ಸಹ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜ ನೇತೃತ್ವದಲ್ಲಿ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ.