ಕಟ್ಟಡ ನೆಲಸಮ ಕೇಸ್‌ – ಕಂಗನಾಗೆ ಗೆಲುವು, ಬಿಎಂಸಿಗೆ ಹೈಕೋರ್ಟ್‌ ಚಾಟಿ

Public TV
2 Min Read
Kangana 2

– ಬಿಎಂಸಿ ಕ್ರಮ ದುರುದ್ದೇಶದಿಂದ ಕೂಡಿದೆ
– ವಿಲನ್‌ಗಳಿಗೆ ಕಂಗನಾ ಧನ್ಯವಾದ
– ಕಂಗನಾ ಪರಿಹಾರ ಪಡೆಯಲು ಅರ್ಹರು

ಮುಂಬೈ: ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ವಿರುದ್ಧದ ಕಾನೂನು ಹೋರಾಟದಲ್ಲಿ ಬಾಂಬೆ ಹೈಕೋರ್ಟ್‌ ನಟಿ ಕಂಗನಾ ರಾಣಾವತ್‌ ಪರವಾಗಿ ತೀರ್ಪು ನೀಡಿದ್ದು ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಕಂಗನಾ ರಣಾವತ್‌ ಅವರ ಕಟ್ಟಡವನ್ನು ಒಡೆದಿರುವ ಬಿಎಂಸಿ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ ಕೋರ್ಟ್‌ ಕಂಗನಾ ಸರ್ಕಾರದಿಂದ ಪರಿಹಾರ ಪಡೆಯಲು ಅರ್ಹರು ಎಂದು ಹೇಳಿದೆ.

ನ್ಯಾ.ಎಸ್.ಜೆ.ಕಾತಾವಾಲ ಮತ್ತು ಆರ್.ಐ.ಚಾಗ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ವ್ಯಕ್ತಿಯ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ಪ್ರದರ್ಶಿಸುವುದನ್ನು ಒಪ್ಪಲಾಗದು. ಇದು ಕಾನೂನಿನ ದುರುಪಯೋಗ ಅಲ್ಲದೇ ಬೇರೇ ಏನೂ ಅಲ್ಲ ಎಂದು ಅಭಿಪ್ರಾಯಪಟ್ಟು ಬಿಎಂಸಿಗೆ ಚಾಟಿ ಬೀಸಿದೆ.

ಅರ್ಜಿಯಲ್ಲಿ ಕಂಗನಾ 2 ಕೋಟಿ ರೂ.ಪರಿಹಾರ ಕೇಳಿದ ವಿಚಾರಕ್ಕೆ ಕೋರ್ಟ್‌, ಈ ಸಂಬಂಧವಾಗಿ ಕೋರ್ಟ್‌ ಓಬ್ಬರು ಮೌಲ್ಯಮಾಪಕರನ್ನು ನೇಮಿಸುತ್ತದೆ. ಇವರು ಕಟ್ಟಡಕ್ಕೆ ಆಗಿರುವ ಹಾನಿಯನ್ನು ಅಂದಾಜಿಸಿ 2021ರ ಮಾರ್ಚ್‌ ಒಳಗಡೆ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ಸೂಚಿಸಿದೆ. ತನ್ನ ಆದೇಶದಲ್ಲಿ ಕೋರ್ಟ್‌ ಅರ್ಜಿದಾರರು ಸರ್ಕಾರದ ಬಗ್ಗೆಅಭಿಪ್ರಾಯಗಳನ್ನು ಹೇಳುವಾಗ ಸಂಯಮವನ್ನು ತೋರಿಸಬೇಕು ಎಂದು ಹೇಳಿದೆ.

ಕೋರ್ಟ್‌ ಆದೇಶಕ್ಕೆ ಪ್ರತಿಕ್ರಿಯಿಸಿದ ಕಂಗನಾ ಸತ್ಯಕ್ಕೆ ಜಯವಾಗಿದೆ. ಈ ಹೋರಾಟದಲ್ಲಿ ನನಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ತೀರ್ಪು ಬರಲು ಕಾರಣರಾದ ʼವಿಲನ್‌ʼಗಳಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಸುಶಾಂತ್‌ ಸಿಂಗ್‌ ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ಪ್ರಕರಣ ಚರ್ಚೆ ಆಗುತ್ತಿದ್ದಾಗಲೇ ಬಿಎಂಸಿ ಏಕಾಏಕಿ ಮುಂಬೈಯಲ್ಲಿದ್ದ ಕಂಗನಾ ಬಂಗಲೆಯನ್ನು ಕೆಡವಲು ಆದೇಶ ನೀಡಿತ್ತು.

ಬಿಎಂಸಿ ಕಂಗನಾ ಅವರು ಅಕ್ರಮವಾಗಿ ಈ ಕಟ್ಟಡವನ್ನು ನಿರ್ಮಿಸಿದ್ದಾರೆ ಎಂದು ಹೇಳಿದ್ದರೆ, ಕಂಗನಾ ನಾನು ಅಕ್ರಮ ಎಸಗಿಲ್ಲ ಎಂದು ಹೇಳಿ ಕಂಗನಾ ಕೋರ್ಟ್‌ ಮೊರೆ ಹೋಗಿದ್ದರು.

Kangana Ranaut office 2

ಕೋರ್ಟ್‌ ಏನು ಹೇಳಿತ್ತು?
ಬಾಂಬೆ ಹೈಕೋರ್ಟ್ 26 ಮಾರ್ಚ್ 2020ರಂದು ರಾಜ್ಯ ಸರ್ಕಾರ, ಬಿಎಂಸಿ ಮತ್ತು ಸಂಬಂಧಿತ ವಿಭಾಗಗಳು ಯಾರ ವಿರುದ್ಧವೂ ಆತುರದ ನಿರ್ಧಾರಗಳನ್ನ ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ನೀಡಿತ್ತು. ಮಾರ್ಚ್ 26ರ ಆದೇಶಕ್ಕೆ ಸಂಬಂಧಿಸಿದಂತೆ ಕೋವಿಡ್‌ 19 ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 30ರವರೆಗೆ ವಿಚಾರಣೆಯನ್ನು ವಿಸ್ತರಿಸಿತ್ತು. ಈ ಕಾಲಾವಧಿಯಲ್ಲಿ ಯಾರೇ ಸಮಸ್ಯೆ ಅನುಭವಿಸಿದ್ದರೂ ಹೈಕೋರ್ಟ್ ಬಾಗಿಲು ತಟ್ಟಬಹುದು ಎಂದು ನ್ಯಾಯಾಲಯ ಹೇಳಿತ್ತು. ಈ ನಡುವೆ ನೋಟಿಸ್‌ ನೀಡಿದ 24 ಗಂಟೆಯ ಒಳಗಡೆ ಸೆಪ್ಟೆಂಬರ್‌ 9ರಂದು ಬಾಂದ್ರಾದಲ್ಲಿರುವ ಕಂಗನಾ ಅವರಿಗೆ ಸೇರಿದ ಪಲಿಹಿಲ್ ಬಂಗಲೆ ಅಕ್ರಮವಾಗಿದೆ ಎಂದು ಆರೋಪಿಸಿ ಬಿಎಂಸಿ ಕಟ್ಟಡದ ಒಂದು ಭಾಗವನ್ನು ತೆರವುಗೊಳಿಸಿತ್ತು.

ನ್ಯಾಯಾಲಯದ ಆದೇಶವಿದ್ದರೂ ಬಿಎಂಸಿ ಉದ್ದೇಶಪೂರ್ವಕವಾಗಿ ತನ್ನ ವಿರುದ್ಧ ಸೇಡು ಕೈಗೊಳ್ಳಲು ಬಂಗಲೆಯನ್ನು ಕೆಡವಿದೆ ಎಂದು ಕಂಗನಾ ವಾಗ್ದಾಳಿ ನಡೆಸಿದ್ದರು.

Kangana 1

Share This Article
Leave a Comment

Leave a Reply

Your email address will not be published. Required fields are marked *