ಚಾಮರಾಜನಗರ: ಸೀಲ್‍ಡೌನ್ ಪ್ರದೇಶಲ್ಲಿನ ನಿವಾಸಿಯೊಬ್ಬರ ಜಾನುವಾರುಗಳಿಗೆ ಮೇವು ಇಲ್ಲ ಎಂಬ ಸುದ್ದಿ ತಿಳಿದ ಚಾಮರಾಜನಗರ ಜಿಲ್ಲಾ ಪೊಲೀಸರು ಮೇವು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಸಿದ್ದಪ್ಪ ಎಂಬುವವರು ಕಂಟೈನ್ಮೆಂಟ್ ಜೋನ್‍ನಲ್ಲಿರುವ ಕಾರಣ ಜಾನುವಾರುಗಳಿಗೆ ಮೇವು ಒದಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂಬಂಧ ಲೋಕೇಶ್ ಎಂಬುವವರು ಜಿಲ್ಲಾ ಪೊಲೀಸರಿಗೆ ವಿಚಾರ ತಿಳಿಸಿದ್ದರು. ವಿಚಾರ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂತೇಮರಳ್ಳಿಯ ಪೊಲೀಸರಿಗೆ ಮೇವು ತಲುಪಿಸುವಂತೆ ಸೂಚಿಸಿದ್ದರು.
Advertisement
Advertisement
ಮೇಲಾಧಿಕಾರಿ ಸೂಚನೆಯ ಬೆನ್ನಲ್ಲೇ ಸಂತೇಮರಳ್ಳಿ ಠಾಣೆಯ ಪೊಲೀಸರು ಮಧ್ಯರಾತ್ರಿಯೆ ಕಂಟೈನ್ಮೆಂಟ್ ನಿವಾಸಿಯ ಜಾನುವಾರುಗಳಿಗೆ ಮೇವನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈಗ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.