ನವದೆಹಲಿ: ಭಾರತದ ಪುರುಷರ ಹಾಕಿ ತಂಡ 41 ವರ್ಷದ ಬಳಿಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದೆ. ಈ ಕಂಚಿನ ಪದಕ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸುವುದಕ್ಕಿಂತಲು ಮಿಗಿಲು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಜರ್ಮನಿ ತಂಡವನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕ ಪಡೆದುಕೊಂಡಿದೆ. ಈ ಕುರಿತು ಟ್ವಿಟ್ಟರ್‍ನಲ್ಲಿ ಶುಭಾಶಯ ತಿಳಿಸಿದ ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡ ಗೆದ್ದ 1983, 2007 ಮತ್ತು 2011ರ ವಿಶ್ವಕಪ್‍ಗಿಂತ ಹಾಕಿಯಲ್ಲಿ ಗೆದ್ದ ಕಂಚಿನ ಪದಕ ಮಿಗಿಲು ಎಂದಿದ್ದಾರೆ.
Forget 1983, 2007 or 2011, this medal in Hockey is bigger than any World Cup! #IndianHockeyMyPride ???????? pic.twitter.com/UZjfPwFHJJ
— Gautam Gambhir (@GautamGambhir) August 5, 2021
ಭಾರತ ತಂಡ ಐತಿಹಾಸಿಕ ಗೆಲುವು ಪಡೆಯುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಸಹಿತ ಹಲವು ಗಣ್ಯರು ಭಾರತ ತಂಡಕ್ಕೆ ಶುಭ ಕೋರಿದ್ದಾರೆ. ಇದನ್ನೂ ಓದಿ: 41 ವರ್ಷದ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಹಾಕಿ ತಂಡ
PM Modi spoke to the Men’s Hockey Captain Manpreet Singh, Head Coach Graham Reid and Assistant Coach Piyush Dubey. He congratulated the team for emerging victorious and bringing home the Bronze medal#Olympics
(file photos) pic.twitter.com/eR1KN0Pq1S
— ANI (@ANI) August 5, 2021
ಮೋದಿ ಭಾರತ ತಂಡ ಪದಕ ವಿಜಯಿಯಾಗುತ್ತಿದ್ದಂತೆ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ, ಮೂಖ್ಯ ಕೋಚ್ ಗ್ರಹಾಂ ರೀಡ್ ಮತ್ತು ಸಹಾಯಕ ಕೋಚ್ ಪಿಯೂಷ್ ದುಬೆ ಅವರಿಗೆ ಅಭಿನಂದನೆ ಸಲ್ಲಿಸಿ ಮೂವರೊಂದಿಗೆ ಮಾತುಕತೆ ನಡೆಸಿದರು.
The Captain and Coach of the Indian Men’s Hockey Team???? ???????? had a surprise caller after their historic victory this morning in #Tokyo2020
Listen in and send in your wishes as the country celebrates an #Olympics medal in hockey after 41 years????????????
And don’t forget to #Cheer4India pic.twitter.com/XU0VNXeSMw
— SAI Media (@Media_SAI) August 5, 2021