ಕೋಲ್ಕತ್ತಾ: ವಿಡಿಯೋ ಚಾಟ್ ಆ್ಯಪ್ ‘ಫ್ಯಾನ್ಸಿಯೂ’ ಪ್ರಚಾರಕ್ಕಾಗಿ ಒಪ್ಪಿಗೆಯಿಲ್ಲದೆ ನನ್ನ ಫೋಟೋವನ್ನು ಬಳಸಿದೆ ಎಂದು ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಕೋಲ್ಕತ್ತಾ ಪೊಲೀಸರಿಗೆ ದೂರು ನೀಡಿದ್ದಾರೆ.
ನಟಿ ನುಸ್ರತ್ ಜಹಾನ್ ಟ್ವೀಟ್ ಮಾಡುವ ಮೂಲಕ ತಮ್ಮ ಫೋಟೋವನ್ನು ಬಳಸಿರುವುದಾಗಿ ದೂರು ನೀಡಿದ್ದಾರೆ. ಅಲ್ಲದೇ ವಿಡಿಯೋ ಚಾಟ್ ಆ್ಯಪ್‍ಗಾಗಿ ಜಾಹೀರಾತಿ ನೀಡಿರುವ ಸ್ಕ್ರೀನ್‍ಶಾಟ್ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಿದ್ದಾರೆ. ನಂತರ ಈ ಟ್ವೀಟನ್ನು ಕೋಲ್ಕತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
Advertisement
Advertisement
“ಒಪ್ಪಿಗೆಯಿಲ್ಲದೆ ಫೋಟೋಗಳನ್ನು ಬಳಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಹೀಗಾಗಿ ಕೋಲ್ಕತಾ ಪೊಲೀಸ್ ಸೈಬರ್ ಸೆಲ್ ಈ ಬಗ್ಗೆ ಗಮನಹರಿಸುವಂತೆ ನಾನು ವಿನಂತಿಸುತ್ತೇನೆ. ಇದನ್ನು ಕಾನೂನುಬದ್ಧವಾಗಿ ತೆಗೆದುಕೊಳ್ಳಲು ನಾನು ಸಿದ್ಧ” ಎಂದು ಜಹಾನ್ ಟ್ವೀಟ್ ಮಾಡಿದ್ದಾರೆ.
Advertisement
Advertisement
ಅಲ್ಲದೇ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ನಟಿ, ಸಂಸದೆ ನುಸ್ರತ್ ಜಹಾನ್ ಮನವಿಗೆ ಹಿರಿಯ ಅಧಿಕಾರಿಯೊಬ್ಬರು ಸ್ಪಂದಿಸಿದ್ದು, ಸೈಬರ್ ಸೆಲ್ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
This is totally unacceptable – using pictures without consent. Would request the Cyber Cell of @KolkataPolice to kindly look into the same. I am ready to take this up legally. ????@CPKolkata https://t.co/KBgXLwSjR4
— Nussrat Jahan (@nusratchirps) September 21, 2020