ಶ್ವಾನವೊಂದು ತನ್ನ ಒಡತಿಯೊಂದಿಗೆ ಯೋಗಾಭ್ಯಾಸ ಮಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಮನಗೆಲ್ಲುತ್ತಿದೆ.
ವೀಡಿಯೋದಲ್ಲಿ ಶ್ವಾನವು ತನ್ನ ಒಡತಿ ಜೊತೆ ಯೋಗಾಸನದ ಮ್ಯಾಟ್ ಹಾಸಿಕೊಂಡು ಅವರ ಪಕ್ಕದಲ್ಲಿ ನಿಂತು ಯೋಗ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಮೇರಿ ಹಾಗೂ ಸೀಕ್ರೆಟ್ ಎಂಬವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ಸರಳ ಬೆಳಗಿನ ಡೊಗಾ. ಸೀಕ್ರೆಟ್(ಶ್ವಾನ) ಕೊನೆಯದಾಗಿ ಪೋಸ್ ನೀಡಿದೆ. ಮೊದಲಿಗೆ ಒಂದು ಬದಿಯಲ್ಲಿ ಇನ್ನೊಂದಕ್ಕೆ ಸುತ್ತಿಕೊಳ್ಳದೆ ತನ್ನ ಪಂಜಗಳನ್ನು ಹಿಡಿದಿಡಲು ಕಷ್ಟಪಟ್ಟಿತು. ಆದರೆ ಸಮತೋಲನವನ್ನು ಹೇಗೆ ಉಳಿಸಿಕೊಳ್ಳಬೇಕೆಂದು ಇದೀಗ ಶ್ವಾನ ಕಲಿತುಕೊಂಡಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
View this post on Instagram
ವೀಡಿಯೋದಲ್ಲಿ 6 ವರ್ಷದ ಸೀಕ್ರೆಟ್, ಮಕ್ಕಳಂತೆ ಯೋಗಾಸನದ ಭಂಗಿಗಳನ್ನು ತೋರಿಸಿದೆ. ಕೋಬ್ರಾ ಪೋಸ್, ಡೌನ್‍ವಾರ್ಡ್ ಡಾಗ್, ಮೂರು ಕಾಲಿನಲ್ಲಿ ನಿಂತುಕೊಂಡು ಯೋಗ ಮಾಡಿದೆ. ಅಲ್ಲದೆ ಮೆಲೋಡಿ ಪಿಯಾನೋ ಮ್ಯೂಸಿಕ್‍ನನ್ನು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವುದವುದನ್ನು ಕೇಳಬಹುದಾಗಿದೆ.
ಅಮೆರಿಕದ ಮಾಜಿ ವೃತ್ತಿಪರ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್‍ರವರು ಕೂಡ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಯವರೆಗೂ ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ 4 ಮಿಲಿಯನ್ ವ್ಯೂಸ್ ಬಂದಿದೆ.