– ಹಣ ನೀಡುವ ಭರವಸೆ ನೀಡಿದ್ದ ಯೂಟ್ಯೂಬರ್
ಮಾಸ್ಕೋ: ರಷ್ಯಾ ಮೂಲದ 60 ವರ್ಷದ ವೃದ್ಧ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್‍ನಲ್ಲಿ ಲೀಟರ್‍ಗಟ್ಟಲೇ ಮದ್ಯ ಸೇವಿಸುವ ಚಾಲೆಂಜ್ ಸ್ವೀಕರಿಸಿದ್ದು, 1.5 ಲೀಟರ್ ಓಡ್ಕಾ ಕುಡಿಯುತ್ತಿದ್ದಂತೆ ಲೈವ್ ಸ್ಟ್ರೀಮಿಂಗ್ ವೇಳೆಯೇ ಕುಸಿದು, ಸಾವನ್ನಪ್ಪಿದ್ದಾನೆ.
Advertisement
ರಷ್ಯಾದ ಸ್ಮೋಲೆಂಕ್ಸ್ ನಲ್ಲಿ ಘಟನೆ ನಡೆದಿದ್ದು, ವೃದ್ಧನಿಗೆ ಯೂಟ್ಯೂಬರ್ ಹಣದ ಆಫರ್ ನೀಡಿದ್ದಕ್ಕೆ ಲೈವ್ ಸ್ಟ್ರೀಮಿಂಗ್ ವೇಳೆಯೇ 1.5 ಲೀಟರ್ ಓಡ್ಕಾ ಕುಡಿದಿದ್ದಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಟ್ರೆಂಡ್ ಸೃಷ್ಟಿಯಾಗಿದ್ದು, ಹೆಚ್ಚು ವ್ಯೂವ್ಸ್ ಪಡೆಯಲು ತರಹೇವಾರಿ ಸಾಹಸ ಮಾಡುತ್ತಿದ್ದಾರೆ. ಇದಕ್ಕೆ ಥ್ರ್ಯಾಶ್ ಸ್ಟ್ರೀಮ್ಸ್ ಅಥವಾ ಟ್ರ್ಯಾಶ್ ಸ್ಟ್ರೀಮ್ಸ್ ಎಂದು ಕರೆಯುತ್ತಾರೆ. ಅಂದರೆ ವಿವಿಧ ರೀತಿಯ ಸ್ಟಂಟ್ಸ್, ಭಯಾನಕ ಸವಾಲುಗಳ ಮೂಲಕ ನೋಡುಗರನ್ನು ಸೆಳೆಯುತ್ತಾರೆ. ಹೆಚ್ಚು ವ್ಯೂವ್ಸ್ ಪಡೆಯಲು ಬೇರೊಬ್ಬರಿಗೆ ಹಣ ನೀಡಿ ಇಂತಹ ಸ್ಟಂಟ್ ಮಾಡಿಸುತ್ತಾರೆ. ಅದೇ ರೀತಿ ಮಾಡಲು ಹೋಗಿ ಇದೀಗ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
Advertisement
Advertisement
ರಷ್ಯಾ ಮೂಲದ 60 ವರ್ಷದ ವೃದ್ಧನನ್ನು ಯೂರಿ ದುಶೆಚ್ಕಿನ್ ಎಂದು ಗುರುತಿಸಲಾಗಿದ್ದು, ವೃದ್ಧನಿಗೆ ಹಣ ನೀಡುವುದಾಗಿ ಯೂಟ್ಯೂಬರ್ ಆಫರ್ ಮಾಡಿದ್ದ. ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ವೇಳೆ ಮದ್ಯ ಅಥವಾ ಹಾಟ್ ಸಾಸ್ ಸೇವಿಸಿದರೆ ಹಣ ನೀಡುವುದಾಗಿ ಆಫರ್ ಮಾಡಿದ್ದ.
Advertisement
ವೃದ್ಧ ಬರೋಬ್ಬರಿ 1.5 ಲೀಟರ್ ಓಡ್ಕಾ ಸೇವಿಸುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಯೂಟ್ಯೂಬ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾಗಲೇ ಈ ಘಟನೆ ಸಂಭವಿಸಿದ್ದು, ವೀವರ್ಸ್ ಈ ಘಟನೆ ನೋಡಿ ಆಘಾತಕ್ಕೊಳಗಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಷ್ಯನ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಟ್ರ್ಯಾಶ್ ಸ್ಟ್ರೀಮ್ಸ್ ಗಳನ್ನು ಬ್ಯಾನ್ ಮಾಡಬೇಕೆಂದು ರಷ್ಯಾದ ಸೆನೆಟರ್ ಅಲೆಕ್ಸಿ ಪುಷ್ಕೋವ್ ಒತ್ತಾಯಿಸಿದ್ದಾರೆ.