– ಬೆಂಗಳೂರಿನಲ್ಲಿ 1,373 ಮಂದಿಗೆ ಸೋಂಕು
– ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31,105ಕ್ಕೆ ಏರಿಕೆ
ಬೆಂಗಳೂರು: ಇಂದು ಒಂದೇ ದಿನ 2,228 ಮಂದಿಗೆ ಸೋಂಕು ಬಂದಿದ್ದು, 957 ಮಂದಿ ಬಿಡುಗಡೆಯಾಗಿ, 17 ಮಂದಿ ಮೃತಪಟ್ಟಿದ್ದಾರೆ.
ಎಂದಿನಂತೆ ಬೆಂಗಳೂರಿನಲ್ಲಿ ಅತಿಹೆಚ್ಚು 1,373 ಮಂದಿಗೆ ಸೋಂಕು ಕಾಣಿಸಿದ್ದರೆ ದಕ್ಷಿಣ ಕನ್ನಡದಲ್ಲಿ 167 ಮಂದಿಗೆ ಸೋಂಕು ಬಂದಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31,105ಕ್ಕೆ ಏರಿಕೆಯಾಗಿದೆ. ಒಟ್ಟು 12,833 ಮಂದಿಗೆ ಸೋಂಕು ಬಂದಿದ್ದು, 17,782 ಸಕ್ರಿಯ ಪ್ರಕರಣಗಳಿವೆ. ಒಟ್ಟು 486 ಮಂದಿ ಮೃತಪಟ್ಟಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು 1373, ದಕ್ಷಿಣ ಕನ್ನಡ 167, ಕಲಬುರಗಿ 85, ಧಾರವಾಡ 75, ಮೈಸೂರು 52, ಬಳ್ಳಾರಿ 41, ದಾವಣಗೆರೆ 40, ಶಿವಮೊಗ್ಗ 37, ಬಾಗಲಕೋಟೆ 36, ಕೋಲಾರ 34, ಚಿಕ್ಕಮಬಳ್ಳಾಪುರ 32, ತುಮಕೂರು 27, ಮಂಡ್ಯ 24, ಉತ್ತರ ಕನ್ನಡ 23, ಉಡುಪಿ 22, ಹಾಸನ 21, ಹಾವೇರಿ 18, ರಾಮನಗರ 17, ಯಾದಗಿರಿ 16, ರಾಯಚೂರು 16, ಬೆಂಗಳೂರು ಗ್ರಾಮಾಂತರ 16, ಬೀದರ್ 15, ಚಾಮರಾಜನಗರ 12, ಬೆಳಗಾವಿ 9, ಗದಗ 6, ಚಿಕ್ಕಮಗಳೂರು 5, ಕೊಡಗು 4, ಕೊಪ್ಪಳ 2, ಚಿತ್ರದುರ್ಗ 2, ವಿಜಯಪುರ ಒಂದು ಪ್ರಕರಣ ದೃಢಪಟ್ಟಿದೆ.

ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 957 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರ 606, ಹಾವೇರಿ 48, ಕಲಬುರಗಿ 41, ಬಳ್ಳಾರಿ 38, ಉತ್ತರ ಕನ್ನಡ 38, ದಕ್ಷಿಣ ಕನ್ನಡ 36, ಉಡುಪಿ 28, ರಾಮನಗರ 27, ಧಾರವಾಡ 17, ತುಮಕೂರು 17, ಹಾಸನ 16, ಮಂಡ್ಯ 15, ಮೈಸೂರು 14, ಚಿಕ್ಕಬಳ್ಳಾಪುರ 6, ವಿಜಯಪುರ 6, ದಾವಣಗೆರೆಯಲ್ಲಿ 4 ಮಂದಿ ಬಿಡುಗಡೆಯಾಗಿದ್ದಾರೆ.

ಐಸಿಯುನಲ್ಲಿ ಎಷ್ಟು ಮಂದಿ?
ಬೆಂಗಳೂರು 292, ಧಾರವಾಡ 19, ರಾಯಚೂರು 18, ಕಲಬುರಗಿ 15, ಬಳ್ಳಾರಿ 11, ಬೀದರ್ 11, ಮಂಡ್ಯ 11, ಮೈಸೂರು 10, ಬೆಳಗಾವಿ 9, ಗದಗ, ತುಮಕೂರು, ದಕ್ಷಿಣ ಕನ್ನಡದಲ್ಲಿ ತಲಾ 7, ದಾವಣಗೆರೆ 6, ಶಿವಮೊಗ್ಗ 5, ಕೊಪ್ಪಳ 5, ಹಾಸನ, ಚಿಕ್ಕಬಳ್ಳಾಪುರ, ಬಾಗಲಕೋಟೆ , ಉಡುಪಿ 3, ಚಾಮರಾಜನಗರ, ಕೊಡಗು, ಹಾವೇರಿಯಲ್ಲಿ ತಲಾ 2 ಚಿಕ್ಕಮಗಳೂರಿನಲ್ಲಿ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ.

