ಬೆಂಗಳೂರು: ಸೋಮವಾರ AIDSO ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಜಂಟಿಯಾಗಿ ‘ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸಬೇಡಿ, ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಯ ಒತ್ತಡ ಬೇಡ’ ಎಂದು ಒತ್ತಾಯಿಸಿ, ಅಡ್ಮಿನಿಸ್ಟ್ರೇಷನ್ ಬ್ಲಾಕ್ ಬಳಿ ಪ್ರತಿಭಟನೆ ನಡೆಸಿದರು.
Advertisement
ಮಾನ್ಯ ಕುಲಪತಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಹತ್ತಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಭವನದ ಮುಂದೆಯೇ ಒಂದು ಸಾಂಕೇತಿಕ ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಗೆ ವಿವಿ ಆಡಳಿತ ಮಂಡಳಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
Advertisement
Advertisement
ಈಗಾಗಲೇ ಕೊರೊನಾ ಒಡ್ಡಿರುವ ಸವಾಲುಗಳು, ಜೀವನದಲ್ಲಿ ಉಂಟಾಗಿರುವ ಅಭದ್ರತೆ ಮತ್ತು ಜೀವ ಉಳಿಸಿಕೊಳ್ಳುವ ಹೆಣಗಾಟದಲ್ಲಿ ಇರುವಾಗ ಒಂದು ತಿಂಗಳಲ್ಲಿ ಎರಡು ಪರೀಕ್ಷೆಯ ಸುದ್ದಿ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಆಘಾತವನ್ನು ಉಂಟುಮಾಡಿತ್ತು. ಇದು ಕೇವಲ ಆಘಾತಕಾರಿ ಅಷ್ಟೇ ಅಲ್ಲದೆ, ಅವೈಜ್ಞಾನಿಕ ಮತ್ತು ಅತಾರ್ಕಿಕ. ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಪ್ರಜಾ ತಾಂತ್ರಿಕವಾಗಿ ಚರ್ಚಿಸಿ ಯಾವುದೇ ಶೈಕ್ಷಣಿಕ ವಿಷಯದ ನಿರ್ಧಾರ ತೆಗೆದುಕೊಂಡರೆ ನಮಗೆ ಅನುಕೂಲ ಆಗುತ್ತದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡು ನಿರ್ಮಿಸಲು ಹೊರಟಿರುವುದು ದುರದೃಷ್ಟಕರ: ದುಂಡಪ್ಪಾ ಕೋಮಾರ
Advertisement
ಬೇಡಿಕೆಗಳು :
1. ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಬೇಡಿ.
2. ಎರಡು ಡೋಸ್ ಉಚಿತ ವ್ಯಾಕ್ಸಿನ್ ಆದ ನಂತರವೇ ಆಫ್ ಲೈನ್ ತರಗತಿ / ಆಫ್ ಲೈನ್ ಪರೀಕ್ಷೆಗಳನ್ನು ನಡೆಸಿ.