ನವದೆಹಲಿ: ಗ್ರಾಮೀಣ ಕುಟುಂಬಗಳಿಗೆ ಆಸ್ತಿ ಹಕ್ಕಿನ ಕಾರ್ಡ್ ನೀಡುವ ‘ಸ್ವಾಮಿತ್ವʼ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಇದೊಂದು ಐತಿಹಾಸಿಕ ಹೆಜ್ಜೆ ಗ್ರಾಮೀಣ ಕುಟುಂಬಗಳು ಈ ಕಾರ್ಡ್ ಮೂಲಕ ಸಾಲ ಮತ್ತು ಇತರೆ ಹಣಕಾಸು ಸೌಲಭ್ಯಗಳನ್ನು ಪಡೆಯಲು ಬಳಸಬಹುದು ಎಂದು ತಿಳಿಸಿದರು. ಸ್ವಾಮಿತ್ವ ಯೋಜನೆಯಿಂದ ಗ್ರಾಮೀಣ ಭಾಗದ ಜನತೆ ಆತ್ಮರ್ಭರ್ ಆಗಲಿದ್ದಾರೆ ಎಂದು ಬಣ್ಣಿಸಿದರು.
Advertisement
PM @narendramodi launches the Physical distribution of Property cards under SVAMITVA Scheme; Provides an Integrated Property Validation Solution for Rural India. #SampatiSeSampanta pic.twitter.com/Lxeu60UWEQ
— MyGovIndia (@mygovindia) October 11, 2020
Advertisement
ಈ ಸಂದರ್ಭದಲ್ಲಿ ‘ಸ್ವಾಮಿತ್ವ‘ ಯೋಜನೆಯಡಿ ಆಯ್ಕೆಯಾದ ಗ್ರಾಮಗಳ ಕೆಲ ಫಲಾನುಭವಿಗಳ ಜೊತೆಗೂ ಪ್ರಧಾನಿ ಮೋದಿ ಸಂವಾದ ನಡೆಸಿದರು.
Advertisement
ಏನಿದು ಕಾರ್ಡ್?
ಸರ್ವೆ ಆಫ್ ವಿಲೇಜಸ್ ಆಂಡ್ ಮ್ಯಾಪಿಂಗ್ ವಿಥ್ ಇಂಪ್ರೂವೈಸ್ಡ್ ಟೆಕ್ನಾಲಜಿ ಇನ್ ವಿಲೇಜ್ ಏರಿಯಾಸ್(SVAMITVA) ಸ್ವಾಮಿತ್ವ ಯೋಜನೆಯಡಿ ಡಿಜಿಟಲ್ ಭಾರತದ ಭಾಗವಾಗಿ ರೂಪಿಸಲಾದ ಈ ಸ್ವಾಮಿತ್ವ ಕಾರ್ಡ್‍ನಲ್ಲಿಯೇ ಎಲ್ಲಾ ಆಸ್ತಿಗಳ ದಾಖಲೆಗಳು ಇರಲಿದೆ. ಗ್ರಾಮೀಣ ಕುಟುಂಬಗಳು ಸಾಲ ಮತ್ತು ಇತರೆ ಹಣಕಾಸು ಸೌಲಭ್ಯ ಪಡೆಯಲು ಈ ಕಾರ್ಡನ್ನು ಬಳಸಬಹುದಾಗಿದೆ.
Advertisement
In a landmark event, PM @narendramodi launches physical distribution of Property Cards under the SVAMITVA Scheme. A huge step towards digitalising grassroots, transforming rural India. #SampatiSeSampanta pic.twitter.com/JiuiAnWK1M
— MyGovIndia (@mygovindia) October 11, 2020
ದೇಶಾದ್ಯಂತ 6 ರಾಜ್ಯಗಳ 763 ಗ್ರಾಮಗಳನ್ನು ಮೊದಲ ಹಂತಕ್ಕೆ ಆಯ್ಕೆ ಮಾಡಲಾಗಿದೆ. ಉತ್ತರ ಪ್ರದೇಶದ 346, ಹರ್ಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44, ಉತ್ತರಾಖಂಡದ 50, ಕರ್ನಾಟಕ 2 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
1 ಲಕ್ಷ ಕುಟುಂಬಗಳು ತಮಗೆ ಕಳಿಸಲಾದ ಎಸ್‍ಎಂಎಸ್ ಲಿಂಕ್ ಬಳಸಿ, ಆಸ್ತಿ ಕಾರ್ಡ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಆಸ್ತಿ ಹೊಂದಿರುವ 1 ಲಕ್ಷ ಆಸ್ತಿದಾರರು ತಮ್ಮ ಆಸ್ತಿ ಪತ್ರಗಳನ್ನು ಡೌನ್‌ಲೋಡ್ ಮಾಡಲು ಶಕ್ತರಾಗಲಿದ್ದಾರೆ. ಮುಂದಿನ 4 ವರ್ಷದ ಒಳಗಡೆ 6.62 ಲಕ್ಷ ಗ್ರಾಮಗಳು ಈ ಯೋಜನೆಯ ಅಡಿ ಬರಲಿದೆ.
A historic effort towards rural transformation. #SampatiSeSampanta https://t.co/VYNk6nTcg6
— Narendra Modi (@narendramodi) October 11, 2020