– ಕಾಲೇಜು ಹುಡುಗರ ನಡುವೆ ಬಿಗ್ ಫೈಟ್, ವೀಡಿಯೋ ವೈರಲ್
– ಮೂವರಿಗೆ ಗಾಯ, ಆಸ್ಪತ್ರೆಗೆ ಶಿಫ್ಟ್
ಮುಂಬೈ: ಒಂದು ಹುಡುಗಿಗಾಗಿ ಕಾಲೇಜಿನ ಹುಡುಗರು ಹೊಡೆದಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ನಗರದ ಪಾರ್ಕ್ ನಲ್ಲಿ ಈ ಹೊಡೆದಾಟ ನಡೆದಿದೆ. ಹುಡುಗಿಯ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ ಎಂದು ವರದಿಯಾಗಿದೆ. ಗಲಾಟೆ ವೇಳೆ ವಿದ್ಯಾರ್ಥಿಗಳು ಪಾರ್ಕ್ ನಲ್ಲಿದ್ದ ಕೋಲುಗಳಿಂದ ಒಬ್ಬರ ಮೇಲೊಬ್ಬರು ಹಲ್ಲೆ ನಡೆಸಿರೋದು ವೀಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ವೀಡಿಯೋ ವೈರಲ್ ಆಗಿದ್ದು, ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ವೀಡಿಯೋ ವೈರಲ್ ಬಳಿಕ ಪೊಲೀಸರು ಗಲಾಟೆಯಲ್ಲಿ ಭಾಗಿಯಾಗಿರುವ ಹುಡುಗರ ಪತ್ತೆಗೆ ಮುಂದಾಗಿದ್ದಾರೆ. ಗಲಾಟೆಯಲ್ಲಿ ಭಾಗಿಯಾಗಿರೋ ಹುಡುಗ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಪಾರ್ಕ್ ನಲ್ಲಿ ಸೇರಿಕೊಂಡು ಹೊಡೆದಾಡಿಕೊಳ್ಳುತ್ತಾರೆ ಎಂದು ಸಾರ್ವಜನಿರಕು ಹೇಳಿದ್ದಾರೆ.