ಲಕ್ನೋ: ಒಂದು ವರ್ಷದಿಂದ ಅತ್ಯಾಚಾರ ಮಾಡಿದ್ದಲ್ಲದೆ, ಕೃತ್ಯದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಚಂದ್ರಮಾ ರಾಜ್ ಭರ್(24) ಕಳೆದು 1 ವರ್ಷದಿಂದ 17ರ ಹುಡುಗಿಯ ಮೆಲೆ ಅತ್ಯಾಚಾರವನ್ನು ನಡೆಸುತ್ತಾ ಬಂದಿದ್ದ ಆರೋಪಿ ಜೈಲು ಪಾಲಾಗಿದ್ದಾನೆ.
ಆರೋಪಿ ರಾಜ್ ಭರ್ ನನ್ನ ಮೇಲೆ 1 ವರ್ಷಗಳಿಂದ ಅತ್ಯಾಚಾರ ಎಸಗಿದ್ದಾನೆ. ಚಿತ್ರ ಹಿಂಸೆಯನ್ನು ನೀಡುತ್ತಾ ಬಂದಿದ್ದಾನೆ. ಈ ವಿಚಾರವನ್ನು ಎಲ್ಲಾದರೂ ಹೇಳಿದರೆ ಭೀಕರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದನು. ಈ ವಿಚಾರಕ್ಕಾಗಿ ನಾನು ಭಯಗೊಂಡು ಹೇಳಿರಲಿಲ್ಲ ಎಂದು ಹುಡುಗಿ ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ.
ಅತ್ಯಾಚಾರಕ್ಕೋಳಗಾದ ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಅತ್ಯಾಚಾರದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ತನಿಖೆ ನಡೆಸುತ್ತೇವೆ ಎಂದು ಸುಖಪುರ್ ಸ್ಟೇಷನ್ ಹೌಸ್ ಆಫೀಸರ್ ವೀರೇಂದ್ರ ಯಾದವ್ ಹೇಳಿದ್ದಾರೆ.