ಬೆಂಗಳೂರು: ಬಿಗ್‍ಬಾಸ್ ಸೀಸನ್-8 ಆರಂಭಗೊಂಡು ವಾರ ಕಳೆದಿದೆ. ಒಂಟಿ ಮನೆಯ 17 ಮಂದಿ ಪೈಕಿ ಟಿಕ್‍ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರ ಮನೆಯಿಂದ ಹೊರ ಹೋಗಲು ವಿಶ್ವನಾಥ್, ನಿರ್ಮಲಾ, ಶುಭಾ ಪೂಂಜಾ, ಧನುಶ್ರೀ ಮತ್ತು ರಘು ಗೌಡ ನಾಮಿನೇಟ್ ಆಗಿದ್ದರು.
ಮೊದಲ ವಾರವೇ ಮನೆಯಿಂದ ಹೋದ್ರೆ ಹೇಗೆ ಅಂತ ಶುಕ್ರವಾರ ಎಪಿಸೋಡ್ ನಲ್ಲಿ ಧನುಶ್ರೀ ಸಪ್ಪೆ ಮೋರೆ ಹಾಕಿಕೊಂಡಿದ್ರು. ಇದೀಗ ಬಿಗ್‍ಬಾಸ್ ಮನೆಯಿಂದ ಧನುಶ್ರೀ ಹೊರ ಬಂದಿದ್ದಾರೆ.


