ಬೆಂಗಳೂರು: ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಇಂದಿನಿಂದ ಗ್ರ್ಯಾಂಡ್ ಒಪನಿಂಗ್ ಸಿಗಲಿದೆ. ಒಂಟಿ ಮನೆಗೆ ಬರುವ ಸ್ಪರ್ಧಿಗಳು ಫೈನಲ್ ಆಗಿದ್ದಾರೆ.
ಇಂದು ಸಂಜೆ 6ಕ್ಕೆ
ಬಿಗ್ ಬಾಸ್ ಸೀಸನ್ 8 | ಪ್ರತಿ ರಾತ್ರಿ 9.30#BBK8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/3B8kujM5HO
— Colors Kannada (@ColorsKannada) February 28, 2021
ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿಗೆ ಸ್ಪರ್ಧಿಗಳು ಫೈನಲ್ ಆಗಿದ್ದಾರೆ. ಈ ಹಿಂದೆ ಹಲವು ಸ್ಟಾರ್ ನಟನಟಿ, ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿತ್ತು. ಆದರೆ ಇಂದು ಅಸಲಿಯಾಗಿ ಒಂಟಿ ಮನೆಯೊಳಗೆ ತಮ್ಮ ಆಟವನ್ನು ಆಡಲು ಹೋಗುತ್ತಿರುವವವರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.
ಸ್ಯಾಂಡಲ್‍ವುಡ್ ಸ್ಟಾರ್ ನಟಿಯರು ಸೆಲೆಟ್ರಿಗಳು ಹಾಗೂ ಇನ್ನಿತರ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಲವರ ಹೆಸರು ಕೇಳಿಬರುತ್ತಿತ್ತು. ಆದರೆ ಇಂದು ಕೇಳಿ ಬಂದಿರುವ ಹೆಸರುಗಳು ದೊಡ್ಡ ಮನೆಯಲ್ಲಿ ಆಟ ಆಡಲು ಬರುತ್ತಿದ್ದಾರೆ ಎನ್ನುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪುಟ್ಟಗೌರಿ ಖ್ಯಾತಿಯ ಚಂದ್ರಕಲಾ ಮೋಹನ್, ಹಾಡು ಕರ್ನಾಟಕ ಫೇಮ್ ವಿಶ್ವನಾಥ್ ಹಾವೇರಿ, ನಾಯಕ ಸುನಿಲ್ ರಾವ್ ಮತ್ತು ಓರ್ವ ಬೈಕ್ ರೈಡರ್ ಸೇರಿದಂತೆ ಹಲವು ಕಿರುತೆರೆಯ ನಟನಟಿಯರು ಹಾಗೂ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ದೊಡ್ಡ ಮನೆಯಲ್ಲಿ ಬಂಧಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಹಾಡುವ ಕೋಗಿಲೆಗಳು, ನಟಿಸುವ ಗೊಂಬೆಗಳು, ನಕ್ಕುನಗಿಸುವ ಹಾಸ್ಯ ಕಲಾವಿದರು, ಹಿರಿಯ ಕಲಾವಿದರು ಹೀಗೆ ಹಲವರು ಒಂಟಿ ಮನೆಗೆ ಎಂಟ್ರಿಕೊಟಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕನ್ನಡ ಬಿಗ್‍ಬಾಸ್ ಪ್ರಾರಂಭವಾಗುತ್ತೆ ಎನ್ನುವ ಸುದ್ದಿಯನ್ನು ಕೇಳಿದ ಬಿಗ್‍ಬಾಸ್ ಅಭಿಮಾನಿಗಳು ನಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಒಂಟಿಮನೆಗೆ ಯಾರು ಹೋಗುತ್ತಾರೆ..? ಸುದೀಪ್ ಅವರನ್ನು ಯಾವೆಲ್ಲ ಹೊಸ ಗೇಟಪ್‍ಗಳಲ್ಲಿ ನೋಡಬಹುದು ಎಂದು ಚರ್ಚೆ ಮಾಡುತ್ತಿದ್ದರು. ಈ ಎಲ್ಲಾ ವಿಚಾರಗಳಿಗೆ ಇಂದು ತೆರೆಬಿಳಲಿದೆ.
ಪ್ರತಿ ವರ್ಷ ಬಿಗ್ ಬಾಸ್‍ಗಿಂತ ಈ ವರ್ಷ ಕೊಂಚ ವಿಭಿನ್ನವಾಗಿರುವುದು ಖಂಡಿತಾ ಹೌದು. ಸುದೀಪ್ ತಮ್ಮದೇ ಆಗಿರುವ ಮಾತಿನ ಶೈಲಿಯಿಂದ ಖಡಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಪರ್ಧಿಗಳು ವಿಭಿನ್ನವಾದ ಮನಸ್ಥಿತಿ ಮತ್ತು ಆಲೋಚನೆಗಳೊಂದಿಗೆ ತಮ್ಮ ಆಟವನ್ನು ಆಡಲು ಒಂಟಿ ಮನೆಗೆ ಗ್ರ್ಯಾಂಡ್ ಎಂಟ್ರಿಕೊಡಲು ಸಿದ್ಧರಾಗಿದ್ದಾರೆ.
ಇಂದು ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಬಿಗ್‍ಬಾಸ್ ಕಾರ್ಯಕ್ರಮದ ಗ್ರ್ಯಾಂಡ್ ಒಪನಿಂಗ್ ನಡೆಯಲಿದೆ. ಕಂಟೆಸ್ಟೆಂಟ್‍ಗಳು ವೇದಿಕೆಗೆ ಏರುವುದರ ಜೊತೆಗೆ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುತ್ತವೆ. ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಬಿಗ್‍ಬಾಸ್ ಇಂದಿನಿಂದ ಮನರಂಜನೆ ನೀಡಲು ಎಲ್ಲಾ ತಯಾರಿಯನ್ನು ನಡೆಸಿದೆ. 100 ದಿನಗಳ ಆಟ ಇಂದಿನಿಂದ ಪ್ರಾರಂಭಾವಾಗಲಿದೆ.