ಚೆನ್ನೈ: ಭಾರತದ ವಿರುದ್ಧ 227 ರನ್‌ಗಳ ಅಂತರದಿಂದ ಗೆದ್ದ ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರ‍್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದ್ದು, ಮೊದಲ ಸ್ಥಾನದಲ್ಲಿದ್ದ ಭಾರತ 4ನೇ ಸ್ಥಾನಕ್ಕೆ ಜಾರಿದೆ.
ಭಾರತ 4ನೇ ಸ್ಥಾನಕ್ಕೆ ಜಾರಿದ್ದರೂ ಟೆಸ್ಟ್ ಚಾಂಪಿಯನ್ ಫೈನಲ್‌ಗೆ ಏರಲು ಅವಕಾಶವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿಯುವುದರೊಂದಿಗೆ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಪಡೆ ಈಗಾಗಲೇ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ಏರಿದೆ.
Advertisement
A huge win over India in the first Test has propelled England to the top of the ICC World Test Championship standings ????#WTC21 pic.twitter.com/8AaC8XMrjr
— ICC (@ICC) February 9, 2021
Advertisement
ಪ್ರಸ್ತುತ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಪಟ್ಟಿಯಲ್ಲಿ ಇಂಗ್ಲೆಂಡ್ 11 ಜಯ, 4 ಸೋಲು, 3 ಡ್ರಾದೊಂದಿಗೆ 442 ಅಂಕ ಗಳಿಸಿದೆ. ಭಾರತ 8 ಜಯ, 4 ಸೋಲಿನೊಂದಿಗೆ 430 ಅಂಕ ಪಡೆದಿದೆ. ಆದರೆ ಪರ್ಸಂಟೇಜ್ ಆಫ್ ಪಾಯಿಂಟ್‌ನಲ್ಲಿ ಆಸ್ಟ್ರೇಲಿಯಾ ಮುಂದಿರುವ ಕಾರಣ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಜಾರಿದೆ.
Advertisement
Advertisement
ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಹೋಗಬೇಕಾದರೆ ಭಾರತ ಮುಂದೆ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಯಾವುದೇ ಕಾರಣಕ್ಕೂ ಸೋಲಬಾರದು. ಒಂದು ವೇಳೆ ಸೋತರೆ ಫೈನಲ್‌ಗೆ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳಲಿದೆ. ಭಾರತ ಒಂದು ಪಂದ್ಯವನ್ನು ಡ್ರಾ ಮಾಡಿ 2-1 ಅಂತರ ಅಥವಾ 3-1 ಅಂತರದಿಂದ ಪಂದ್ಯ ಗೆದ್ದರೆ ಮಾತ್ರ ಫೈನಲ್ ಪ್ರವೇಶಿಸಲಿದೆ. ಇಂಗ್ಲೆಂಡ್ 4-0, 3-0, 3-1 ಅಂತರದಿಂದ ಗೆದ್ದರೆ ಫೈನಲ್ ಪ್ರವೇಶಿಸಲಿದೆ.
ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ತವರಿಗೆ ಮರಳಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದೆ. ಗೆಲ್ಲಲು 420 ರನ್‌ಗಳ ವಿಶ್ವ ದಾಖಲೆಯ ಗುರಿಯನ್ನು ಪಡೆದಿದ್ದ ಭಾರತ 58.1 ಓವರ್‌ಗಳಲ್ಲಿ192 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.
39 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡರ್‌ಸನ್ ಬೌಲಿಂಗ್‌ಗೆ ತತ್ತರಿಸಿತು. ಕೊಹ್ಲಿ ಮತ್ತು ಅಶ್ವಿನ್ ನಡುವೆ 7ನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ಬಂದಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಜೊತೆಯಾಟ ಸಿಗದ ಕಾರಣ ಪಂದ್ಯವನ್ನು ಭಾರತ ಸೋತಿದೆ.