ಐಶ್ವರ್ಯಾ ರೈಗೆ ಹುಟ್ಟುಹಬ್ಬದ ಸಂಭ್ರಮ- ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ ಸಿನಿಮಾಗಳು

Public TV
2 Min Read
aishwarya rai

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬಾಲಿವುಡ್ ಮಾತ್ರವಲ್ಲ ಹಲವು ಹಾಲಿವುಡ್ ಸಿನಿಮಾಗಳಲ್ಲಿ ಸಹ ಅವರು ಮಿಂಚಿದ್ದಾರೆ. 1994ರಲ್ಲಿ ಪ್ರತಿಷ್ಠಿತ ವಿಶ್ವ ಸುಂದರಿ ಕಿರೀಟ ಗೆದ್ದ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಸಾಲು ಸಾಲು ಸಿನಿಮಾಗಳ ಆಫರ್ ಬರಲು ತೊಡಗಿದವರು. ಹೀಗಾಗಿ ವಿಶ್ವ ಮಟ್ಟದ ನಟಿಯಾಗಿ ಗುರುತಿಸಿಕೊಂಡರು.

Aishwarya Rai

ಐಶ್ವರ್ಯಾ ರೈ ಬಚ್ಚನ್ ಕೇವಲ ಬಾಲಿವುಡ್ ಮಾತ್ರವಲ್ಲ, ಹಲವು ಹಾಲಿವುಡ್ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಅವರ ಹುಟ್ಟುಹಬ್ಬವಾದ ಇಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿದ ಅವರ ಸಿನಿಮಾಗಳ ಕುರಿತು ಮಾಹಿತಿಯನ್ನು ಹೊತ್ತು ತಂದಿದ್ದೇವೆ.

aishwarya rai bachchan 40th birthday 20

ಐಶ್ವರ್ಯಾ ಅವರ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿವೆ. ಈ ಪೈಕಿ ಟಾಪ್ 5 ಸಿನಿಮಾಗಳು ಇಲ್ಲಿವೆ. ಐಶ್ವರ್ಯಾ ನಟನೆಯ ಹೆಚ್ಚು ಹಣ ಗಳಿಸಿದ ಸಿನಿಮಾದ ಪಟ್ಟಿಯಲ್ಲಿ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾ ಮೊದಲ ಸ್ಥಾನದಲ್ಲಿದ್ದು, ಬರೋಬ್ಬರಿ 106.48 ಕೋಟಿ ರೂ.ಗಳನ್ನು ಗಳಿಸಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಐಶ್ವರ್ಯಾ ರೋಮ್ಯಾನ್ಸ್ ಮಾಡಿದ್ದಾರೆ ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಸಹ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕುರಿತು ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ 106.48 ಕೋಟಿ ರೂ. ಗಳಿಸಿತು. ಈ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದರೂ ಐಶ್ವರ್ಯಾ ಹೆಚ್ಚು ಜನರನ್ನು ಆಕರ್ಷಿಸಿದ್ದರು.

ranbir aishwarya 1475054046

ಬಳಿಕ ಐಶ್ ಅಭಿನಯದ ‘ಧೂಮ್ 2’ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. 2006ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ಹೃತಿಕ್ ರೋಷನ್ ಅಭಿನಯದ ಸಿನಿಮಾ ಬರೋಬ್ಬರಿ 81 ಕೋಟಿ ರೂ.ಗಳನ್ನು ಬಾಚಿತ್ತು. ಅಭಿಷೇಕ್ ಬಚ್ಚನ್ ಉದಯ್ ಚೋಪ್ರಾ ಸಹ ಈ ಸಿನಿಮಾದಲ್ಲಿ ನಟಿಸಿದ್ದರು. ಸುಂದರ ಸ್ಥಳಲ್ಲಿನ ಚಿತ್ರೀಕರಣ ಹಾಗೂ ಆ್ಯಕ್ಷನ್‍ನಿಂದಾಗಿ ಈ ಸಿನಿಮಾ ಸದ್ದು ಮಾಡಿತ್ತು.

dhoom 2

ಇದಾದ ಬಳಿಕ ಮತ್ತೆ ಹೃತಿಕ್ ರೋಷನ್ ಜೊತೆ ಐಶ್ವರ್ಯಾ ಅಭಿನಯಿಸಿದ ‘ಜೋಧಾ ಅಕ್ಬರ್’ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಮಾತ್ರವಲ್ಲದೇ ಅಷ್ಟೇ ವಿವಾದವನ್ನು ಸಹ ಹುಟ್ಟು ಹಾಕಿತ್ತು. 2008ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿನ ಹೃತಿಕ್ ರೋಷನ್ ಹಾಗೂ ಐಶ್ ಕೆಮಿಸ್ಟ್ರಿ ಕಂಡು ಪ್ರೇಕ್ಷಕರು ಮೂಕ ವಿಸ್ಮಿತರಾಗಿದ್ದರು. ಹೀಗಾಗಿ ಈ ಸಿನಿಮಾ 56.04 ಕೋಟಿ ರೂ.ಗಳಿಕೆ ಕಂಡಿತ್ತು.

jodha akbar

ಇದರ ಮಧ್ಯೆ ಮಣಿ ರತ್ನಂ ಅವರ ‘ಗುರು’ ಸಿನಿಮಾದಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿಯೇ ಒಂದಾಯಿತು. ತೆರೆ ಮೇಲೆ ಸಹ ಇವರ ಅದ್ಭುತ ಕೆಮಿಸ್ಟ್ರಿ ಸಿನಿ ರಸಿಕರನ್ನು ಸೆಳೆಯಿತು. ಹೀಗಾಗಿ 2007ರ ಅತಿ ದೊಡ್ಡ ಹಿಟ್ ಸಿನಿಮಾ ಆಯಿತು. ಪ್ರೇಕ್ಷರನ್ನು ಮೋಡಿ ಮಾಡಿದ್ದ ಸಿನಿಮಾ, 45.49 ಕೋಟಿ ರೂ.ಗಳಿಸುವ ಮೂಲಕ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿತ್ತು. ಮಾತ್ರವಲ್ಲದೆ ಐಶ್-ಅಭಿಷೇಕ್ ಅದ್ಭುತ ನಟನೆ ಪ್ರೇಕ್ಷಕರನ್ನು ಮರಳು ಮಾಡಿತ್ತು.

abhishek aishwarya jpg

ಶಾರುಖ್ ಖಾನ್ ಹಾಗೂ ಐಶ್ವರ್ಯ ರೈ ಕಾಂಬಿನೇಷನ್‍ನಲ್ಲಿ 2000ರಲ್ಲಿ ಮೂಡಿ ಬಂದ ‘ಮೊಹಬ್ಬತೀನ್’ ಸಿನಿಮಾ ಸಹ ಭಾರೀ ಸದ್ದು ಮಾಡಿತ್ತು. ಬಹು ತಾರಾಗಣದ ಈ ಸಿನಿಮಾ 2000ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇತ್ತೀಚೆಗೆ 20 ವರ್ಷಗಳನ್ನು ಪೂರೈಸಿದೆ. 41.88 ಕೋಟಿ ರೂ.ಗಳನ್ನು ಬಾಚಿಕೊಳ್ಳುವ ಮೂಲಕ ಶಾರುಖ್-ಐಶ್ ಜೋಡಿ ಮೋಡಿ ಮಾಡಿತ್ತು.

933982 mohabbatein

Share This Article
Leave a Comment

Leave a Reply

Your email address will not be published. Required fields are marked *