ಜೈಪುರ್: ಐವರು ಪುತ್ರಿಯರ ಪ್ರೇರಣೆಯಿಂದ ರಾಜಸ್ಥಾನದ ಶಾಸಕರೊಬ್ಬರು 40 ವರ್ಷಗಳ ನಂತರ ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ.
ಉದಯಪುರ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ(62) ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ. ಮಕ್ಕಳಿಂದ ಹೊಸ ಹುಮ್ಮಸ್ಸು ಪಡೆದಿರುವ ಇವರು ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ.
Advertisement
Advertisement
ಯಾವುದೇ ಡಿಗ್ರಿ ಇಲ್ಲದಿರುವುದರಿಂದ ಮುಜುಗರ ಅನುಭವಿಸುತ್ತಿದ್ದೆನು. ರಾಜಕೀಯ ಕ್ಷೇತ್ರದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿದ್ದೇನೆ. ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವ ಕುರಿತು ಸರಿಯಾದ ಭಾಷಣ ಮಾಡಲು ಕೂಡಾ ಆಗುತ್ತಿರಲಿಲ್ಲ. ಇದನ್ನು ಮನಗೊಂಡು ವಿದ್ಯಾಭ್ಯಾಸ ಪುನರ್ ಆರಂಭಿಸಿದ್ದೇನೆ ಎಂದು ಮೀನಾ ಹೇಳಿದ್ದಾರೆ.
Advertisement
Advertisement
ಚಿಕ್ಕವನಿದ್ದಾಗಲೇ 7ನೇ ತರಗತಿವರೆಗೆ ಓದಿದ್ದ ನನ್ನ ವಿದ್ಯಾಭ್ಯಾಸವನ್ನ ಬಳಿಕ ಮೊಟಕುಗೊಳಿಸಿದ್ದರು. ಇದೀಗ ಮಕ್ಕಳಿಂದ ಹೊಸ ಹುಮ್ಮಸ್ಸು ಬಂದಿದೆ ಎಂದಿದ್ದಾರೆ. 2013 ರಿಂದ ಶಾಸಕರಾಗಿರುವ ಇವರು, ಡಿಗ್ರಿ ಪಾಸ್ ಮಾಡಿದ ಮೇಲೆ ಮಾಸ್ಟರ್ ಡಿಗ್ರಿ ಮುಗಿಸಿ, ಪಿಹೆಚ್‍ಡಿ ಮಾಡುತ್ತಾರೆ ಎಂದು ತಿಳಿದು ಬಂದಿದೆ.