ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.
ಇಂದು ನಡೆಯುತ್ತಿರುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಧೋನಿ ಈ ಸಾಧನೆ ಮಾಡಿದ್ದು, ಇದುವರೆಗೂ 194 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಇದಕ್ಕೂ ಮುನ್ನ ಸುರೇಶ್ ರೈನಾ 193 ಪಂದ್ಯಗಳನ್ನಾಡಿ ಮೊದಲ ಸ್ಥಾನದಲ್ಲಿದ್ದರು.
Advertisement
Congratulations Mahi bhai (@msdhoni) at becoming the most capped IPL player. Happiest that my record is being broken by you. All the best for the game today and am sure @ChennaiIPL will win this season’s @IPL. pic.twitter.com/f5BRQTJ0aF
— Suresh Raina???????? (@ImRaina) October 2, 2020
Advertisement
ಉಳಿದಂತೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 192, ಕೋಲ್ಕತ್ತಾ ತಂಡದ ನಾಯಕ ದಿನೇಶ್ ಕಾರ್ತಿಕ್ 185, ಆರ್‌ಸಿಬಿ ತಂಡದ ನಾಯಕ ಕೊಹ್ಲಿ 180 ಪಂದ್ಯಗಳೊಂದಿಗ ಕ್ರಮವಾಗಿ 3 ರಿಂದ 5ನೇ ಸ್ಥಾನವನ್ನು ಪಡೆದಿದ್ದಾರೆ. ಐಪಿಎಲ್ 2020ರ ಆವೃತ್ತಿಯಿಂದ ಸುರೇಶ್ ರೈನಾ ಹಿಂದೆ ಸರಿದಿದ್ದರು. ಸದ್ಯ ಧೋನಿ ಸಾಧನೆಗೆ ಟ್ವಿಟ್ಟರ್ ನಲ್ಲಿ ರೈನಾ ಶುಭ ಕೋರಿದ್ದಾರೆ.
Advertisement
Back with the #yellove bang for 2020. ???????? #WhistlePodu #WhistleFromHome #CSKvSRH pic.twitter.com/MrPdZvXRpJ
— Chennai Super Kings (@ChennaiIPL) October 2, 2020
Advertisement
ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 2020ರ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, 6 ದಿನಗಳ ವಿರಾಮದ ಬಳಿಕ ಸಿಎಸ್‍ಕೆ ಇಂದು ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಇದಕ್ಕೂ ಮುನ್ನ ರಾಜಸ್ಥಾನ ಹಾಗೂ ಡೆಲ್ಲಿ ವಿರುದ್ಧ ಚೆನ್ನೈ ಸೋಲುಂಡಿತ್ತು. ಆದರೆ ಇಂದಿನ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ರಾಯುಡು, ಬ್ರಾವೋ ಕಮ್‍ಬ್ಯಾಕ್ ಮಾಡಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಬ್ರಾವೋಗೆ 2020ರ ಐಪಿಎಲ್‍ನಲ್ಲಿ ಇದು ಮೊದಲ ಪಂದ್ಯವಾಗಿದೆ.
Three changes for #CSK in the Playing XI for today’s game.#SRH remain unchanged.#Dream11IPL #CSKvSRH pic.twitter.com/esFRDZZ3Qi
— IndianPremierLeague (@IPL) October 2, 2020