ಹಾಂಕಾಂಗ್: ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ 59 ದಶಲಕ್ಷ ಡಾಲರ್ ಗೆ(429 ಕೋಟಿ ರೂ.) ಮಾರಾಟವಾಗುವುದರ ಮೂಲಕ ದಾಖಲೆ ನಿರ್ಮಿಸಿದೆ.
ಹಾಂಕಾಂಗ್ ಉದ್ಯಮಿ ವಿಕ್ಟರ್ ಲಿ ಅವರ ಸಿಕೆ ಅಸೆಟ್ ಹೋಲ್ಡಿಂಗ್ಸ್ ಒಡೆತನದ ಅಪಾರ್ಟ್ಮೆಂಟ್ ಅನ್ನು ಅನಾಮಿಕ ವ್ಯಕ್ತಿಯೊಬ್ಬರು ಇಷ್ಟೊಂದು ದುಬಾರಿ ಬೆಲೆ ನೀಡಿ ಖರೀದಿಸಿದ್ದಾರೆ.
ಈ ಕಟ್ಟಡದ ಒಂದು ಚದರ ಅಡಿ ಜಾಗದ ಬೆಲೆ 17,500 ಡಾಲರ್ (12.70 ಲಕ್ಷ ರೂ.) ಇದೆ. 23 ಮಹಡಿಯಲ್ಲಿರುವ ಈ ಫ್ಲ್ಯಾಟ್ 3,378 ಚದರ ಅಡಿಯನ್ನು ಹೊಂದಿದೆ. ಇದರಲ್ಲಿ 5 ಬೆಡ್ ರೂಂ, ಒಂದು ಈಜು ಕೊಳ, ಖಾಸಗಿ ಟೆರೆಸ್, ಮತ್ತು ವಾಹನ ನಿಲುಗಡೆಗಾಗಿ ಮೂರು ಪಾರ್ಕಿಂಗ್ ಜಾಗ ಮೀಸಲಿಡಲಾಗಿದೆ.
ಹಾಂಕಾಂಗ್ನಲ್ಲಿ ಹಲವು ದುಬಾರಿ ಕಟ್ಟಡಗಳಿದ್ದು, ಶ್ರೀಮಂತ ಉದ್ಯಮಿಗಳು ಈ ಅಪಾರ್ಟ್ಮೆಂಟ್ನ ಒಡೆಯರಾಗಿದ್ದಾರೆ. 2019ರಲ್ಲಿ ಸಿಬಿಆರ್ಇ ನಡೆಸಿದ ಸರ್ವೇ ಪ್ರಕಾರ ಹಾಂಕಾಂಗ್ ವಿಶ್ವದ ದುಬಾರಿ ಪಟ್ಟಣಗಳಲ್ಲಿ ಒಂದಾಗಿದೆ.