ವಿಜಯಪುರ: ದೆಹಲಿಯ ಏಮ್ಸ್ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ್ದ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಪತಾಕೆಯನ್ನ ರಾಷ್ಟ್ರ ಮಟ್ಟದಲ್ಲಿ ಹಾರಿಸಿದ್ದಾರೆ.
ವಿಜಯಪುರದ ದಿವ್ಯಾ ಅರವಿಂದ ಹಿರೊಳ್ಳಿ ಡಿಎಂ ಜನರಲ್ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಏಮ್ಸ್ ನವೆಂಬರ್ 20 ರಂದು ಪರೀಕ್ಷೆ ನಡೆಸಿತ್ತು. ದಿವ್ಯಾ ಶೇ.67.08 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
Advertisement
Advertisement
ದಿವ್ಯಾ ವಿಜಯಪುರದ ಸೆಷನ್ಸ್ ಕೋರ್ಟಿನಲ್ಲಿ ಹಿರಿಯ ವಕೀಲರಾಗಿರಿವ ಅರವಿಂದ ಹಿರೊಳ್ಳಿ ಅವರ ಪುತ್ರಿಯಾಗಿದ್ದು, ಬಿಎಲ್ ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಡಿ, ಪಾಂಡಿವೇರಿಯ ಜಿಪ್ ಮೇರ್ (JIPMER) ನಲ್ಲಿ ಫೆಲೋಷಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಫೆಲೋಷಿಪ್ ಇನ್ ನ್ಯೂರೋ ಕ್ರಿಟಿಕಲ್ ಕೇರ್ ವ್ಯಾಸಂಗ ಮಾಡಿದ್ದಾರೆ.
Advertisement
ದಿವ್ಯಾಳ ಸಾಧನೆಯಿಂದ ರಾಷ್ಟ್ರ ಮಟ್ಟದಲ್ಲಿ ವಿಜಯಪುರ ಜಿಲ್ಲೆಯ ಕೀರ್ತಿ ಬೆಳಗಿಸಿದಂತಾಗಿದ್ದು, ದಿವ್ಯಾಗೆ ಜಿಲ್ಲೆಯ ಜನರು ಶುಭಾಶಯ ಕೋರಿದ್ದಾರೆ.
Advertisement