ಕೊಪ್ಪಳ: ಜಿಲ್ಲೆಯಾದ್ಯಂತ ಇಂದು ಹಲವು ಅಡಚಣೆಗಳ ಮದ್ಯೆ ಎಸ್‍ಎಸ್‍ಎಲ್‍ಸಿಯ ಮೊದಲ ಪರೀಕ್ಷೆ ಮುಕ್ತಾಯವಾಗಿದೆ.
ನಗರದಲ್ಲಿ ಕೋವಿಡ್-19 ಆಸ್ಪತ್ರೆ ಪಕ್ಕ ಇರುವ ಎಸ್‍ಎಫ್‍ಎಸ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರದಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಪಕ್ಕದಲ್ಲೆ ಕೋವಿಡ್-19 ಆಸ್ಪತ್ರೆ ಇದ್ದರೂ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಯಡವಟ್ಟಿನಿಂದ ಸುಮಾರು 350 ವಿದ್ಯಾರ್ಥಿಗಳು ಭಯದಲ್ಲೆ ಪರೀಕ್ಷೆ ಬರೆದರು. ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಜಿಲ್ಲಾಡಳಿತ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಕೊರೊನಾ ಭಯದಿಂದ ವಿದ್ಯಾರ್ಥಿಗಳು ಬಸ್ ಹತ್ತದೆ ಬೈಕ್ ಮೇಲೆ ಪರೀಕ್ಷೆ ಬರೆಯಲು ಬಂದಿದ್ದರು.
Advertisement
Advertisement
ಇದೆಲ್ಲದರ ಮಧ್ಯೆ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಶಾಲೆಯ ಸಿಂಗಾರ ನೋಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿವೇಕಾನಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಹಬ್ಬದ ವಾತಾವರಣ ನಿರ್ಮಿಸಿ, ಅಧಿಕಾರಿಗಳಿಂದ ಮತ್ತು ಶಿಕ್ಷಕರಿಂದ ಗೌರವವಂದನೆ ಸಲ್ಲಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಶ್ರೀರಾಮನಗರ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಹಬ್ಬದ ವಾತಾವರಣ ನಿರ್ಮಿಸಿ ಅಧಿಕಾರಿಗಳಿಂದ ಮತ್ತು ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಗೌರವವಂದನೆ ಸಲ್ಲಿಸಲಾಯಿತು.
Gepostet von Suresh Kumar S am Mittwoch, 24. Juni 2020
ಇನ್ನು ಎಸ್‍ಎಫ್‍ಎಸ್ ಶಾಲೆಯಲ್ಲಿ ಸಣ್ಣ ಮಕ್ಕಳು ಉಪಯೋಗಿಸುವ ಡೆಸ್ಕ್ ನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಿ ಎಡವಟ್ಟು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 21,004 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,166 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಮರೆತು ಗುಂಪಾಗಿ ಸೇರಿದ ದ್ರಶ್ಯ ಕಂಡು ಬಂತು.