ಬೆಂಗಳೂರು: ಬೊಮ್ಮನಹಳ್ಳಿ ಎಡಿಟಿಪಿ ದೇವೇಂದ್ರಪ್ಪ ಎಸಿಬಿ ದಾಳಿ ವಿಚಾರವಾಗಿ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಅಮಾನತು ಆದೇಶ ಹೊರಡಿಸಿದರು.
ಈ ಸಂಬಂಧ ಮಾತನಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಎಸಿಬಿ ತನಿಖಾ ವರದಿ ಬಂದ ಮೇಲೆ ತೀರ್ಮಾನ ಆಗಲಿದೆ. ಪಾಲಿಕೆ ಎಲ್ಲ ತೀರ್ಮಾನ ಕೈಗೊಳ್ಳಲು ಸಜ್ಜಾಗಿದೆ. ನಕಲಿ ಒಸಿ ನಕಲಿ ಸೀಲ್ ಹಾಕಲು ಮನೆಯಲ್ಲಿ ಇಟ್ಟಿದ್ದು, ಅನುಮತಿ ಇಲ್ಲದೇ ಕಟ್ಟಡ ಕಟ್ಟಿದ್ದವರಿಗೆ ಅನುಮತಿ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮ ಕಟ್ಟಡ ಮಾಲೀಕರಿಗೂ ಒಸಿ ಪಡೆಯಲು ಇಂತಹ ವ್ಯಕ್ತಿಗಳ ಬಳಸುತ್ತಿದ್ದ ಮಾಹಿತಿ ಇದೆ. ಈ ಮಾಲೀಕದ ವಿರುದ್ಧವು ಕ್ರಿಮಿನಲ್ ಕೇಸ್ ಹಾಕಲು ತೀರ್ಮಾನವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 20 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ
Advertisement
Advertisement
ಸದ್ಯ ಕಟ್ಟಡ ಒಸಿ ಇಲ್ಲದೇ ಜಲಮಂಡಳಿ, ಬೆಸ್ಕಾಂ ಸೇವೆ ಸಿಗಲ್ಲ. ಹೀಗಾಗಿ ನಕಲಿ ಸೀಲ್, ದಾಖಲೆ ಸೃಷ್ಟಿಸಿ ಒಸಿ ನೀಡುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಹೀಗಾಗಿ ಸರ್ಕಾರಿ ಕೆಲಸದಿಂದಲೇ ಈ ಅಧಿಕಾರಿ ವಜಾದ ಬಗ್ಗೆ ಆಲೋಚನೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು. ಇದನ್ನೂ ಓದಿ: ರಾಜ್ಯದ 7 ಭ್ರಷ್ಟರ ಮೇಲೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸಿ ಅಧಿಕಾರಿಗಳು ಸುಸ್ತು
Advertisement
Advertisement
ಕಟ್ಟಡವೊಂದಕ್ಕೆ ಓಸಿ ನೀಡಲು ದೇವೇಂದ್ರಪ್ಪ ಬರೋಬ್ಬರಿ 40 ಲಕ್ಷ ಹಣ ಕೇಳಿದ್ದರಂತೆ. ಅದರ ಅಡ್ವಾನ್ಸ್ ಹಣವಾಗಿ 20 ಲಕ್ಷ ಹಣ ತೆಗೆದುಕೊಳ್ಳೊವಾಗ ಎಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ನಂತರ ವಿಚಾರಣೆಗೆ ಒಳಪಡಿಸಿದಾಗ ಬಿಬಿಎಂಪಿ ಕಚೇರಿಯಲ್ಲೇ ಒಂದಷ್ಟು ನಗದು, ಕಾರಿನಲ್ಲಿ ಏಳುವರೇ ಲಕ್ಷ ಹಣ ಎಲ್ಲವೂ ಸಿಕ್ಕಿತ್ತು. ನಂತರ ಮನೆಯಲ್ಲಿ ಹುಡುಕಾಡಿದಾಗ ಎಸಿಬಿ ಅಧಿಕಾರಿಗಳಿಗೆ ಶಾಕ್ ಕಾದಿತ್ತು ಯಾಕೆಂದರೆ ಮನೆಯಲ್ಲಿ ಮಿನಿ ಬಾರ್ ಒಂದು ತೆರೆದುಕೊಂಡಿತ್ತು. ಇಲ್ಲಿ ವಿದೇಶಿ ಸೇರಿದಂತೆ 120 ಲೀಟರ್ ವಿವಿಧ ಬ್ರ್ಯಾಂಡ್ ನ ಎಣ್ಣೆ ಬಾಟಲ್‍ಗಳು ಪತ್ತೆಯಾಗಿವೆ. ಜೊತೆಗೆ ಬಿಬಿಎಂಪಿ ಕಚೇರಿಯಲ್ಲಿ ಇರಬೇಕಾದ ಬರೋಬ್ಬರಿ 480 ಫೈಲ್‍ಗಳು, ಹಿರಿಯ ಅಧಿಕಾರಿಗಳ ಹೆಸರಿನ ನಕಲಿ ಸೀಲು, ಸೈನ್‍ಗಳು, ವಿವಿಧ ಬ್ಯಾಂಕ್‍ಗಳ ಬೇನಾಮಿ ಅಕೌಂಟ್‍ಗಳು, ಆಸ್ತಿ ಪತ್ರಗಳು ದೊರೆತಿದೆ.