ನೈಸರ್ಗಿಕ ಪಾನೀಯವಾಗಿರುವ ಎಳನೀರು ಸರ್ವರೋಗಕ್ಕೆ ಮದ್ದು ಎನ್ನುವುದು ತಿಳಿದಿರುವ ವಿಷಯವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ. ಎಳನೀರು ಎಂಬುದು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಎಳನೀರಿನ ಸೇವನೆಯಿಂದ ಯಾವೆಲ್ಲ ಆರೋಗ್ಯಕರವಾದ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.
Advertisement
ಎಳನೀರಿನ ಉಪಯೋಗ:
* ಎಳನೀರಿನಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರುವುದರಿಂದಲೇ ಇದೊಂದು ಅಮೃತಸಮಾನವಾದ ಪಾನೀಯವಾಗಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್‍ನ್ನು ಹೆಚ್ಚಿಸುತ್ತದೆ.
Advertisement
Advertisement
* ಎಳನೀರು ಸೇವನೆಯಿಂದ ಕ್ಯಾನ್ಸರ್ ಜನಕ ಕಣಗಳಿಗೆ ವಿರೋಧ ಒಡ್ಡುವುದರಿಂದ ದೇಹವನ್ನು ಕ್ಯಾನ್ಸರ್ ನಿಂದ ತಡೆಯುತ್ತದೆ. ಎಳನೀರಿನ ಇನ್ನೊಂದು ಉತ್ತಮ ಗುಣವೆಂದರೆ ದೇಹದೊಳಗಿನ ರಕ್ತ ಹೆಪ್ಪುಗಟ್ಟದಂತೆ ತಡೆಯುವುದು.
Advertisement
* ಎಳನೀರಿನಲ್ಲಿರುವ ಪೋಟ್ಯಾಷಿಯಂ ಪ್ರಮಾಣ ಇರುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಉರಿ ಮೂತ್ರದ ಸಮಸ್ಯೆಯನ್ನು ನಿವಾರಿಸುತ್ತದೆ.
* ಎಳನೀರಿನಲ್ಲಿರುವ ಪೋಲಿಕ್ ಆಮ್ಲ, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ.
*ಬಿಸಿಲಿನಲ್ಲಿ ಚರ್ಮ ಹೆಚ್ಚಿನ ನೀರನ್ನು ಕಳೆದುಕೊಳ್ಳುವುದರಿಂದ ಒಣಗುತ್ತದೆ. ಎಳನೀರನ್ನು ಹತ್ತಿಯಲ್ಲಿ ಮುಳುಗಿಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಕಳೆದುಕೊಂಡಿದ್ದ ತೇವಾಂಶವನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ.
* ಇಂದಿನ ದಿನಗಳಲ್ಲಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ತಲೆನೋವು. ತಲೆನೋವಿನ ಸಮಸ್ಯೆ ಇರುವವರು ದಿನನಿತ್ಯ ಎಳನೀರು ಕುಡಿಯುವುದು ಉತ್ತಮ ಎಂದು ಹಿರಿಯರು ಹೇಳುತ್ತಾರೆ.