ಎಲ್ಲ ಜನರಿಗೆ ಲಸಿಕೆ – ಬೀದರ್ ಜಿಲ್ಲೆಯ ಗ್ರಾಮ ಈಗ ರಾಜಕ್ಕೆ ಮಾದರಿ

Public TV
2 Min Read
FotoJet 1 6

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಛಾ ಗ್ರಾಮದ ಜನರು ನೂರಕ್ಕೆ ನೂರು ಲಸಿಕೆ ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಆರಂಭದಲ್ಲಿ ಲಸಿಕೆ ಪಡೆದರೆ ಅಡ್ಡಪರಿಣಾಮಗಳು ಆಗುತ್ತವೆ ವದಂತಿ ಹರಡಿದ್ದರೂ ಜನ ಈ ಸುಳ್ಳು ವದಂತಿಯನ್ನು ನಂಬದ ಕಾರಣ 45 ವರ್ಷ ಮೇಲ್ಪಟ್ಟ ಎಲ್ಲ ಜನ ಲಸಿಕೆ ಹಾಕಿದ್ದಾರೆ. ಈ ಗ್ರಾಮದ ಒಟ್ಟು 2,473 ಜನರು ಲಸಿಕೆ ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ.

FotoJet 2 6 medium

45 ವರ್ಷ ಮೇಲ್ಪಟ್ಟ 1,054 ಮಂದಿ, 18 ದಿಂದ 44 ವರ್ಷದ ಒಳಗಿನ ವಿಶೇಷ ಚೇತನರು, ವ್ಯಾಪಾರಿಗಳು ಸೇರಿದಂತೆ 589 ಜನ ಲಸಿಕೆ ಪಡೆದಿದ್ದಾರೆ. ಇದರ ಜೊತೆಗೆ 60 ವರ್ಷ ಮೇಲ್ಪಟ್ಟ 758 ವಯೋವೃದ್ಧರಿಗೂ ಮತ್ತು 71 ಜನ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದವರಿಗೂ ಲಸಿಕೆ ನೀಡಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಗ್ರಾಮಸ್ಥರು ಎಲ್ಲರು ಲಸಿಕೆ ಸ್ವೀಕರಿಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.

FotoJet 3 4 medium

ಹಲವು ತಿಂಗಳಿಂದ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭುವನೇಶ್ ಪಾಟೀಲ್, ತಹಸೀಲ್ದಾರ್, ಸ್ಥಳೀಯ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಹಲವು ಬಾರಿಗೆ ಭೇಟಿ ನೀಡಿ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸ್ಥಳೀಯ ಸಿಬ್ಬಂದಿ ಕೂಡಾ ಹಗಲಿ ಇರುಳು ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಶ್ರಮಿಸಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ. ಇದನ್ನು ಓದಿ:ಬೆಂಗಳೂರಿನ ಸ್ಮಶಾನಗಳಲ್ಲಿರುವ ಅನಾಥ ಅಸ್ಥಿಗಳಿಗೆ ಇಂದು ಮಂಡ್ಯದಲ್ಲಿ ಮೋಕ್ಷ

FotoJet 20 medium

ಸ್ಥಳೀಯ ಶಾಸಕರಾದ ಈಶ್ವರ್ ಖಂಡ್ರೆ ಕೂಡಾ ಗ್ರಾಮದ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಲಸಿಕೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸತತ ಪರಿಶ್ರಮದಿಂದಾಗಿ ಇಂದು ಈ ಗ್ರಾಮ ಸಂಪೂರ್ಣವಾಗಿ ಲಸಿಕೆ ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

FotoJet 4 1 medium

ಜಿಲ್ಲೆಯ 19 ಲಕ್ಷ ಜನಗಳ ಪೈಕಿ ಸದ್ಯ 3 ಲಕ್ಷ ಲಸಿಕೆ ವಿತರಣೆಯಾಗಿದೆ. ಇಡೀ ಜಿಲ್ಲೆಗೆ ಸಂಪೂರ್ಣವಾಗಿ ಲಸಿಕೆ ನೀಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಪರಿಶ್ರಮದಿಂದಾಗಿ ಸಂರ್ಪೂಣವಾಗಿ ಈ ಗ್ರಾಮದಲ್ಲಿ ಲಸಿಕೆ ಮಾಡಲಾಗಿದೆ. ನಮ್ಮದು ಗಡಿ ಜಿಲ್ಲೆಯಾಗಿದ್ದರಿಂದ ಯಾವುದೇ ಸಮಸ್ಯೆಯಾಗದಂತೆ ವೇಗವಾಗಿ ಈ ಲಸಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಲಸಿಕೆ ಪಡೆದ ಗ್ರಾಮಸ್ಥರು ಸುರಕ್ಷವಾಗಿದ್ದು, ಎಲ್ಲರು ಈ ಗ್ರಾಮವನ್ನು ಮಾದರಿಯಾಗಿ ತೆಗೆದುಕೊಂಡು ಎಲ್ಲರು ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಓದಿ:ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

Share This Article
Leave a Comment

Leave a Reply

Your email address will not be published. Required fields are marked *