ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ

Public TV
2 Min Read
Sushant B

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಎಲ್ಲ ಆಯಾಮಗಳಲ್ಲಿ ನಡೆತಯುತ್ತಿದೆ ಎಂದು ಸಿಬಿಐ ಹೇಳಿದೆ. ಸುಶಾಂತ್ ಕುಟುಂಬದ ವಕೀಲರಾದ ವಿಕಾಸ್ ಗ್, ಸಿಬಿಐ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಸಿಬಿಐ ಸ್ಪಷ್ಟನೆ ನೀಡಿದೆ.

sushant

ಸಿಬಿಐ ತನಿಖೆಯನ್ನ ಎಲ್ಲ ಆಯಾಮಗಳಲ್ಲಿ ನಡೆಸುತ್ತಿದೆ. ನಟನ ವೃತ್ತಿ ಮತ್ತು ಖಾಸಗಿ ಜೀವನದ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಣೆ ಮಾಡಲಾಗುತ್ತಿದೆ. ಪ್ರಕರಣದ ಪ್ರತಿ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಅಧಿಕಾರಿಗಳು ನಿರತರಾಗಿದ್ದು, ಯಾವುದೋ ಒಂದು ಅಂಶವೂ ಮಿಸ್ ಆಗದಂತೆ ಗಂಭೀರವಾಗಿ ತನಿಖೆನಡೆಸಲಾಗುತ್ತಿದೆ ಎಂದು ಸಿಬಿಐ ಹೇಳಿದೆ. ಇದನ್ನೂ ಓದಿ: ಸುಶಾಂತ್‍ನನ್ನು ಕತ್ತುಹಿಸುಕಿ ಕೊಲೆ ಮಾಡಲಾಗಿದೆ: ಲಾಯರ್ ವಿಕಾಸ್ ಸಿಂಗ್

Sushant singh rajput body

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಸುಶಾಂತ್ ಕುಟುಂಬಸ್ಥರ ವಿರುದ್ಧ ನಟಿ ರಿಯಾ ಚಕ್ರವರ್ತಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ದಾಖಲಾಗಿರುವ ಎಫ್‍ಐಆರ್ ಸಿಬಿಐಗೆ ತಲುಪಿದೆ. ಈ ಸಂಬಂಧ ರ್ಶೀಘ್ರವೇ ಕ್ರಮ ಜರುಗಿಸುವ ಸಾಧ್ಯತೆಗಳಿವೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರೇರಣೆ – ಚಂದ್ರನ ಮೇಲೆ ಭೂಮಿ ಖರೀದಿಸಿ ಮಡದಿಗೆ ಗಿಫ್ಟ್ ಕೊಟ್ಟ!

Sushant Singh Rajput39s ex assistant Ankit Acharya says bhaiya never locked

ಸುಶಾಂತ್ ಸಿಂಗ್ ಪ್ರಕರಣದಲ್ಲಿ ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ಕಂಡು ಹಿಡಿಯುವಲ್ಲಿ ಸಿಬಿಐ ತಡ ಮಾಡಿದೆ. ಇದರಿಂದ ನನಗೆ ನಿರಾಶೆಯಾಗಿದೆ. ಈ ಹಿಂದೆ ನನ್ನ ಜೊತೆ ಮಾತನಾಡಿದ್ದ ಏಮ್ಸ್ ವೈದ್ಯರ ತಂಡದ ಡಾಕ್ಟರ್ ಒಬ್ಬರು, ನಾನು ಕಳುಹಿಸಿದ್ದ ಸುಶಾಂತ್ ಸಿಂಗ್ ಅವರ ಡೆತ್ ಫೋಟೋಸ್ ನೋಡಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವಕೀಲ್ ವಿಕಾಸ್ ಸಿಂಗ್ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಸುಶಾಂತ್ ತನ್ನ ಹೆಸರಿನಲ್ಲಾಗ್ತಿರುವ ಸರ್ಕಸ್ ನೋಡಿ ನಗುತ್ತಿರಬಹುದು: ಸೋನು ಸೂದ್

sushant singh rajput1

ಅಂದೇ ಸುದ್ದಿಗೋಷ್ಠಿ ನಡೆಸಿದ್ದ ವಿಕಾಸ್ ಸಿಂಗ್, ಸುಶಾಂತ್ ಸಿಂಗ್ ಪ್ರಕರಣ ಸಿಬಿಐ ತನಿಖೆಯಲ್ಲಿ ಹಳ್ಳ ಹಿಡಿಯುತ್ತಿದೆ. ಜೊತೆಗೆ ಸುಶಾಂತ್ ಅವರ ಪ್ರಕರಣ ಬಾಲಿವುಡ್ ಡ್ರಗ್ ಮಾಫಿಯಾದ ಕಡೆಗೆ ತಿರುವು ಪಡೆದುಕೊಳ್ಳುತ್ತಿದೆ. ಈ ಮೂಲಕ ದಿನಕ್ಕೆ ಓರ್ವ ನಟಿಯ ಫ್ಯಾಶನ್ ಶೋ ನಡೆಯುತ್ತಿದೆ ಎಂದು ಕಿಡಿಕಾರಿದರು. ಇಂದು ನಾವು ಅಸಹಾಯಕ ಸ್ಥಿತಿಗೆ ತಲುಪ್ಪಿದ್ದೇವೆ. ಸುಶಾಂತ್ ಪ್ರಕರಣ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಇದನ್ನೂ ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

 sushant singh rajput 75

ಸಾಮಾನ್ಯವಾಗಿ ಇಷ್ಟೋತ್ತಿಗಾಗಲೇ ಈ ಪ್ರಕರಣದ ಕುರಿತು ಸಿಬಿಐ ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈ ದಿನದವರೆಗೂ ಸಿಬಿಐ ಯಾವುದೇ ಸುದ್ದಿಗೋಷ್ಠಿ ಮಾಡಿಲ್ಲ. ಜೊತೆಗೆ ಈ ಪ್ರಕರಣ ಯಾವ ಮಟ್ಟಕ್ಕೆ ಬಂದಿದೆ ಮತ್ತು ಏನನ್ನು ಕಂಡು ಹಿಡಿದಿದ್ದಾರೆ ಎಂದು ಸಿಬಿಐ ಏನನ್ನು ಹೇಳಿಲ್ಲ. ಇದು ಈ ಪ್ರಕರಣದಲ್ಲಿ ಗಭೀರವಾದ ಸಮಸ್ಯೆಯಾಗಿದೆ ಎಂದು ವಿಕಾಸ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *