Connect with us

Bollywood

ಸುಶಾಂತ್ ತನ್ನ ಹೆಸರಿನಲ್ಲಾಗ್ತಿರುವ ಸರ್ಕಸ್ ನೋಡಿ ನಗುತ್ತಿರಬಹುದು: ಸೋನು ಸೂದ್

Published

on

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಸರ್ಕಸ್ ನೋಡಿ ನಗುತ್ತಿರಬಹುದು ಎಂದು ನಟ ಸೋನು ಸೂದ್ ಹೇಳಿದ್ದಾರೆ. ಮೊದಲ ಬಾರಿಗೆ ಸುಶಾಂತ್ ಸಾವಿನ ಬಗ್ಗೆ ಸೋನು ಸೂದ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ನ್ಯೂಸ್ ಪೋರ್ಟಲ್ ಜೊತೆ ಮಾತನಾಡಿರುವ ಸೋನು ಸೂದ್, ಆರಂಭದಲ್ಲಿ ಸುಶಾಂತ್ ಸಾವು ಹೇಗಾಯ್ತು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಆದ್ರೆ ಪ್ರಕರಣ ದಿನಕ್ಕೊಂದು ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಜನರು ಸಹ ಮೂಲ ಉದ್ದೇಶ ಮರೆತಂತೆ ಕಾಣಿಸುತ್ತಿದೆ. ಸಾವಿನ ರಹಸ್ಯ ತಿಳಿಯಲು ಹೊರಟವರು ಹೊಸ ಆಯಾಮಗಳತ್ತ ಮುಖ ಮಾಡುತ್ತಿದ್ದಾರೆ. ತಮ್ಮ ಹೆಸರನಲ್ಲಿ ನಡೆಯುತ್ತಿರುವ ಸರ್ಕಸ್ ನೋಡಿ ಸುಶಾಂತ್ ನಗುತ್ತಿರಬಹುದು ಎಂದಿದ್ದಾರೆ. ಇದನ್ನೂ ಓದಿ: ಈ ವಾರ ಸಾರಾ, ಶ್ರದ್ಧಾ, ರಕುಲ್‍ಗೆ ಎನ್‍ಸಿಬಿ ಸಮನ್ಸ್?

ಸುಶಾಂತ್ ಕುಟುಂಬಸ್ಥರು ಸಹ ಮೌನವಾಗಿದ್ದಾರೆ. ಕೆಲವರು ಸುಶಾಂತ್ ವಕ್ತಾರರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಒಮ್ಮೆಯೂ ಸುಶಾಂತ್ ಅವರನ್ನ ಭೇಟಿಯಾಗದ ಕೆಲವರು ನಟನ ಪರವಾಗಿ ಮಾತನಾಡುತ್ತಿದ್ದಾರೆ. ನಾನು ಕೆಲವು ಬಾರಿ ಸುಶಾಂತ್ ಅವರನ್ನ ಭೇಟಿಯಾಗಿದ್ದು, ಜಿಮ್ ನಲ್ಲಿ ಜೊತೆಯಾಗಿ ವರ್ಕೌಟ್ ಮಾಡಿದ್ದೇವೆ. ಹೊರಗಿನಿಂದ ಬಂದಿದ್ದರೂ ಸುಶಾಂತ್ ಉದ್ಯಮದಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

ಸುಶಾಂತ್ ಪ್ರಕರಣ ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಕೇಸ್ ಆಯಾಮಗಳನ್ನು ಪಡೆದುಕೊಂಡಿದೆ. ಸದ್ಯ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದೆ. ಸಿಬಿಐಗೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ನಡೆಸಿರುವ ವಾಟ್ಸಪ್ ಸಂಭಾಷಣೆಯಲ್ಲಿ ಡ್ರಗ್ಸ್ ಖರೀದಿಯ ಸುಳಿವು ಲಭ್ಯವಾಗಿತ್ತು. ಈ ಮಾಹಿತಿಯನ್ನು ಎನ್‍ಸಿಬಿಗೆ ಸಿಬಿಐ ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಸಿಬಿಐ ತನಿಖೆ ನಡೆಸಿ, ಹಲವರನ್ನ ವಿಚಾರಣೆ ನಡೆಸಿದೆ. ರಿಯಾ ಚಕ್ರವರ್ತಿ ಸೇರಿದಂತೆ 20ಕ್ಕೂ ಅಧಿಕ ಜನರನ್ನ ಎನ್‍ಸಿಬಿ ಬಂಧಿಸಿದೆ. ಇದನ್ನೂ ಓದಿಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

ರಿಯಾ ಚಕ್ರವರ್ತಿ ವಿಚಾರಣೆ ವೇಳೆ ನಟಿಯರಾದ ಸಾರಾ ಅಲಿಖಾನ್, ರಕುಲ್ ಪ್ರೀತ್ ಸಿಂಗ್ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಇಬ್ಬರನ್ನ ವಿಚಾರಣೆಗೆ ಒಳಪಡಿಸಲು ಎನ್‍ಸಿಬಿ ಮುಂದಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಲೋನಾವಾಲದ ಸುಶಾಂತ್ ಫಾರ್ಮ್‍ಹೌಸ್ ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದ ಆಶಿಕಿ ಚೆಲುವೆ ಶ್ರದ್ಧಾ ಕಪೂರ್ ಅವರಿಗೂ ಈ ವಾರ ಎನ್‍ಸಿಬಿ ಸಮನ್ಸ್ ನೀಡಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್- ಗಾಂಜಾ, ಡ್ರಿಂಕ್ಸ್ ಎಲ್ಲ ಬರುತ್ತಿತ್ತು

2018ರಿಂದ ಸುಶಾಂತ್ ಲೋನವಾಲಾ ತೋಟದ ಮನೆಯ ಮ್ಯಾನೇಜರ್ ಆಗಿರುವ ರಯೀಸ್ ಮಾತನಾಡಿದ್ದು, ಈ ತೋಟದ ಮನೆಗೆ ಸುಶಾಂತ್ ಅವರ ಜೊತೆ ಸಾರಾ ಅಲಿ ಖಾನ್ ಮತ್ತು ರಿಯಾ ಚಕ್ರವರ್ತಿಯವರು ಕೂಡ ಬರುತ್ತಿದ್ದರು. ಇಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಜೊತೆಗೆ ಪಾರ್ಟಿಗೆ ಸ್ಮೋಕಿಂಗ್ ಪೆಪರ್ ಕೂಡ ಬರುತ್ತಿತ್ತು. ಆದರೆ ಅದನ್ನು ಅವರು ಯಾವುದಕ್ಕೆ ಬಳಸುತ್ತಿದ್ದರು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೆಟ್‍ನಲ್ಲಿ ನಟ, ನಿರ್ದೇಶಕರಿಗೆ ನಾವು ಹೆಂಡ್ತೀರ ರೀತಿ ವರ್ತಿಸಬೇಕು: ಕಂಗನಾ

ಜೊತೆಗೆ ಲೋನವಾಲಾ ತೋಟದ ಮನೆ ದ್ವೀಪದಲ್ಲಿದ್ದು, ಇಲ್ಲಿನ ಬೋಟ್ ಮ್ಯಾನ್ ಜಗದೀಶ್ ದಾಸ್ ಎನ್‍ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ತೋಟದ ಮನೆ ಸುಶಾಂತ್ ಅವರ ಪಾರ್ಟಿ ಮನೆಯಾಗಿತ್ತು. ಸುಶಾಂತ್ ಅವರ ಸ್ನೇಹಿತರ ಮತ್ತು ಬಾಲಿವುಡ್ ತಾರೆಯರಾದ ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ಅರೆಸ್ಟ್ ಆಗಿರುವ ಶಂಕಿತ ಡ್ರಗ್ ಪೆಡ್ಲರ್ ಜೈದ್ ವಿಲಾತ್ರಾ ಕೂಡ ಇಲ್ಲಿಗೆ ಬರುತ್ತಿದ್ದರು ಎಂದು ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ನನ್ನ ಕನಸಿನ ಮೇಲೆ ನಡೆಸಿದ ಅತ್ಯಾಚಾರವಿದು- ಫೋಟೋ ಶೇರ್ ಮಾಡಿದ ಕಂಗನಾ

Click to comment

Leave a Reply

Your email address will not be published. Required fields are marked *