ಬೆಂಗಳೂರು: ಎಲ್ಲರ ತನಿಖೆ ನಡೆಸಲಿ ಅಂದ್ರೆ ಹುಚ್ಚರ ಕಥೆ ಆಗುತ್ತೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರಿಗೆ ಮಾಡೋಕೆ ಕೆಲಸ ಇಲ್ಲ, ಸದನದಲ್ಲಿ ಚರ್ಚೆ ಮಾಡಲ್ಲ. 224ರಲ್ಲಿ ಮಹಿಳಾ ಶಾಸಕಿಯರು ಇದ್ದಾರೆ. ಇಲ್ಲಿ ಯಾರು ಶ್ರೀರಾಮಚಂದ್ರ ಮತ್ತು ಸೀತೆ ಅನ್ನೋದನ್ನ ಸಾಬೀತು ಮಾಡೋದು ಬೇಕಿಲ್ಲ. ತಮ್ಮ ಆತ್ಮ ಮುಟ್ಟಿಕೊಂಡು ಹೇಳಲಿ. ಹೀಗೆ ಎಲ್ಲರದ್ದು ತನಿಖೆ ಆಗಲಿ ಅಂದ್ರೆ ಹುಚ್ಚರ ಕಥೆ ಆಗುತ್ತೆ. ಸುಧಾಕರ್ ಹೇಳಿಕೆಯನ್ನ ಒಪ್ಪಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಕಾಂಗ್ರೆಸ್‍ನವರಿಗೆ ಮಾಡಲು ಕೆಲಸ ಇಲ್ಲ. ಬಜೆಟ್‍ನಲ್ಲಿ ಕೂರುವ ಕೆಲಸ ಮಾಡಲಿಲ್ಲ. ಬಜೆಟ್ ಕಲಾಪದಲ್ಲಿ ಭಾಗಿಯಾಗಲಿಲ್ಲ. ಆರೋಪ ಯಾರು ಮಾಡಿದ್ದಾರೆ. ಇವರು ಮಾಡೋ ಕುತಂತ್ರಕ್ಕೆ, ಚಿಲ್ಲರೆ ರಾಜಕಾರಣ ಸರಿಯಲ್ಲ. ಒಂದು ಬೆರಳು ಒಬ್ಬರನ್ನ ತೋರಿದ್ರೆ, ನಾಲ್ಕು ಬೆರಳು ಅವರನ್ನೇ ತೋರಲಿದೆ. ಮೇಟಿ ಅವರ ಪ್ರಕರಣದಲ್ಲಿ ಹೆಣ್ಣುಮಗಳು ದೂರು ನೀಡಿದ್ರೂ ಕ್ರಮ ಕೈಗೊಳ್ಳಲಿಲ್ಲ. ಸಿದ್ದರಾಮಯ್ಯನವರ ವಾಚ್ ಪ್ರಕರಣ ಏನಾಯ್ತು? ಇದೆಲ್ಲವನ್ನೂ ಮಾತನಾಡ್ತಾ ಹೋದ್ರೆ ಹಚ್ಚರ ಮಾತಾಗಲಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ, ಹೆಚ್‍ಡಿಕೆ ಏಕಪತ್ನಿವ್ರತಸ್ಥರಾ?- ಸುಧಾಕರ್ ಪ್ರಶ್ನೆ
ಸುಧಾಕರ್ ಹೇಳಿದ್ದೇನು..?
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು ವಿಪಕ್ಷ ನಾಯಕರಿಗೆ ಸವಾಲು ಎಸೆದರು. ಕಾನೂನಿನ ಪ್ರಕಾರ ನ್ಯಾಯಾಲಯದಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಅನ್ಕೊಂಡು ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನಗೆ ಒಬ್ಬಳೇ ಹೆಂಡ್ತಿ, ಯಾವುದೇ ಸಂಬಂಧವಿಲ್ಲ: ಶಿವಲಿಂಗೇಗೌಡ
ನೀವು ನಿಮ್ಮ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಮಾನ್ಯ ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಮತ್ತು ನನ್ನನ್ನು ಸೇರಿದಂತೆ ಎಲ್ಲ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ಆಗಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ವಿವಾಹವೇತರ ಸಂಬಂಧ ಇದೆ ಎಂಬುವುದು ಗೊತ್ತಾಗಲಿ. ಸಿಎಂ ಆಗಿದ್ದಾಗ ಯಾರು ಏನು ಮಾಡಿದ್ರು ಅನ್ನೋದು ಗೊತ್ತಾಗಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಏನು ಏಕಪತ್ನಿವ್ರತಸ್ಥರಾ? ನೈತಿಕತೆ ಬಗ್ಗೆ ಮಾತನಾಡೋರು ಮಾದರಿ ಆಗಿದ್ದರೆ ತನಿಖೆಗೆ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ವೀಡಿಯೋ: ಸುಧಾಕರ್ ‘ಏಕಪತ್ನಿ ವ್ರತಸ್ಥ’ ಹೇಳಿಕೆಗೆ ಗಹಗಹಿಸಿ ನಕ್ಕರು ಸೌಮ್ಯ ರೆಡ್ಡಿ