ಎರಡು ದಿನದಿಂದ ಮಹಿಳೆ ನಾಪತ್ತೆ- ಚಿರತೆ ಹೊತ್ತೊಯ್ದಿರುವ ಶಂಕೆ

Public TV
1 Min Read
mys lady missing

ಮೈಸೂರು: ಕಳೆದ ಎರಡು ದಿನಗಳಿಂದ ನಗರದ ಉತ್ತನಹಳ್ಳಿಯ ಮಹಿಳೆ ನಾಪತ್ತೆಯಾಗಿದ್ದು, ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.

vlcsnap 2021 04 18 13h43m49s505

ಉತ್ತನಹಳ್ಳಿಯ ಆಡಿನ ತೋಟದ ಬಳಿ ಕುರಿ ಮೇಯಿಸಲು ಹೋಗಿದ್ದ ಮಹಿಳೆ, ರಾತ್ರಿಯಾದರೂ ಮನೆಗೆ ವಾಪಾಸಾಗಿಲ್ಲ. ಅನುಮಾನಗೊಂಡ ಗ್ರಾಮಸ್ಥರು, ಮಹಿಳೆಗೆ ಹುಡುಕಾಟ ನಡೆಸಿದ್ದು, ಇನ್ನೂ ಪತ್ತೆಯಾಗಿಲ್ಲ. ಮೊನ್ನೆಯಿಂದ ನಾಪತ್ತೆಯಾಗಿದ್ದು, ಇನ್ನೂ ಸಿಕ್ಕಿಲ್ಲ. ಮಹಿಳೆಯ ಹುಡುಕಾಟದಲ್ಲಿ ಗ್ರಾಮಸ್ಥರು ತೊಡಗಿದ್ದು, ಚಿರತೆ ಹೊತ್ತೊಯ್ದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

vlcsnap 2021 04 18 13h44m04s134

ಈ ಹಿಂದೆಯೂ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿತ್ತು, ಒಂದು ಚಿರತೆಯನ್ನು ಸಹ ಸೆರೆ ಹಿಡಿಯಲಾಗಿತ್ತು. ಇತ್ತೀಚೆಗೆ ಗ್ರಾಮದ ಸುತ್ತಮುತ್ತ ಚಿರತೆ ಓಡಾಟ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇದೀಗ ಮಹಿಳೆ ಕಾಣೆಯಾಗಿರುವುದರಿಂದ ಆತಂಕ ಇನ್ನೂ ಹೆಚ್ಚಿದೆ.

Share This Article
Leave a Comment

Leave a Reply

Your email address will not be published. Required fields are marked *