– ಹೈಕಮಾಂಡ್ ಸಂದೇಶಕ್ಕೆ ಕಾಯುತ್ತಿದ್ದೇನೆ
ಬೆಂಗಳೂರು: ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ ಎಂಬ ಸ್ಫೋಟಕ ಹೇಳಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಂಪುಟ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಜುಲೈ 25ರಂದು ಬರು ಸಂದೇಶಕ್ಕಾಗಿ ಕಾಯುತ್ತಿದೇನೆ. ಹೈಕಮಾಂಡ್ ಯಾವಾಗ ಬೇಡ ಅನ್ನುತ್ತೋ ಆವತ್ತೆ ರಾಜೀನಾಮೆ ನೀಡುತ್ತೇನೆ. ಹೈಕಮಾಂಡ್ ಬೇಡ ಅಂದ್ರೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ನೀಡುತ್ತೇನೆ. ಕೇಂದ್ರದ ನಾಯಕತ್ವ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಮ್ಮ ಹೇಳಿಕೆಯನ್ನ ಪುನರುಚ್ಛಿಸಿದರು.
Advertisement
Advertisement
ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುವುದು ನನ್ನ ಉದ್ದೇಶ. ಹೈಕಮಾಂಡ್ ಹೇಳುವ ಕೊನೆ ಕ್ಷಣದವರೆಗೂ ನನ್ನ ಕರ್ತವ್ಯ ನಿರ್ವಹಿಸುತ್ತೇನೆ. ರಾಜೀನಾಮೆ ನೀಡಿದ ಮರುಕ್ಷಣವೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಈಗ ಬಿಟ್ಟುಬಿಡಿ, ಮುಂದಿನ ವಾರ ಸಿಗೋಣ – ಕೈ ಮುಗಿದು ತೆರಳಿದ್ರು ಅರುಣ್ ಸಿಂಗ್
Advertisement
Advertisement
ಬಿಜೆಪಿ ಪರ್ಯಾಯ ನಾಯಕರು ಹಲವರಿದ್ದಾರೆ. ಆದ್ರೆ ನಾನು ಯಾರ ಹೆಸರನ್ನು ಹೈಕಮಾಂಡ್‍ಗೆ ಶಿಫಾರಸ್ಸು ಮಾಡೋದಿಲ್ಲ. ಮುಂದಿನ ನಾಯಕರನ್ನು ಆಯ್ಕೆ ಮಾಡೋದು ಹೈಕಮಾಂಡ್ ಕೆಲಸ. ಒಂದು ವೇಳೆ ಹೈಕಮಾಂಡ್ ಮುಂದಿನ ನಾಯಕರ ಬಗ್ಗೆ ಕೇಳಿದ್ರೂ ನಾನು ಯಾರ ಹೆಸರನ್ನು ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!
ಜುಲೈ 26ರಂದು ಬಿಜೆಪಿ ಸರ್ಕಾರ ರಚಿಸಿ ಎರಡು ವರ್ಷವಾಗಲಿದೆ. ಆವತ್ತು ನಮ್ಮ ಸರ್ಕಾರದ ಎರಡು ವರ್ಷದ ಸಾಧನೆಯನ್ನು ಜನರ ಮುಂದಿಡುವ ಕೆಲಸ ಮಾಡಲಿದ್ದೇವೆ. ನಮ್ಮ ಕಾರ್ಯಕ್ರಮಗಳ ಕುರಿತ ಕೈಪಿಡಿಯನ್ನು ಹೊರ ತರಲಾಗುತ್ತದೆ ಎಂದರು. ಇದನ್ನೂ ಓದಿ: ಭಾರೀ ಚರ್ಚೆಗೆ ಗ್ರಾಸವಾಗಿದೆ ಬಿಎಸ್‍ವೈ ಮನೆಯಲ್ಲಿ ಸ್ವಾಮೀಜಿಗಳಿಗೆ ನೀಡಿದ್ದ ಕವರ್..!
ಇಂದು ಬೆಳಗ್ಗೆ ಹೇಳಿದ್ದೇನು?:
ಜುಲೈ 25ರ ನಂತರ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನ ಪರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವುದರ ಕುರಿತು ಸುಳಿವು ನೀಡಿದ್ದರು. ಇದನ್ನೂ ಓದಿ: ನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ
ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಜುಲೈ 25ರ ನಂತರ ಹೈಕಮಾಂಡ್ ಸಂದೇಶಕ್ಕೆ ಕಾಯುತ್ತಿದ್ದೇನೆ. ಕೆಲಸ ಮೆಚ್ಚಿ ವರಿಷ್ಠರು 75 ವರ್ಷ ಆದ ಬಳಿಕ 78 ರವರೆಗೂ ಅಧಿಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಪಕ್ಷ ಮತ್ತೆ ಅಧಿಕಾರಕ್ಕೆ ತರೋದು ನನ್ನ ಸಂಕಲ್ಪ. 26 ಕ್ಕೆ ಸರ್ಕಾರದ ಸಾಧನೆ ಬಗ್ಗೆ ವಿಶೇಷ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈ ಕಾರ್ಯಕ್ರಮ ಬಳಿಕ ವರಿಷ್ಠರ ಸೂಚನೆಯಂತೆ ನಡ್ಕೋತೇನೆ. ವರಿಷ್ಠರ ತೀರ್ಮಾನವೇ ನನ್ನ ತೀರ್ಮಾನ ಎಂದು ಬಿಎಸ್‍ವೈ ತಿಳಿಸಿದ್ದರು. ಇದನ್ನೂ ಓದಿ: ಹೈಕಮಾಂಡ್ ಕೈ ಸೇರಿದೆ ವರದಿ – ಜಾತಿ ಚೌಕಟ್ಟು ಮೀರುತ್ತಾ ಬಿಜೆಪಿ?