ಚಾಮರಾಜನಗರ: ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಹಾಕಿದ್ದ ಎರಡು ಚೆಕ್ ಪೋಸ್ಟ್ ಗಳನ್ನು ತೆರವು ಮಾಡಲಾಗಿದೆ. ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಿಕೊಡಲಾಗಿದೆ.
ನೆರೆಯ ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ಹೀಗಾಗಿ ಚಾಮರಾಜನಗರ ಜಿಲ್ಲೆಯ ಹನೂರು ನಾಲಾರೋಡ್ ಹಾಗು ಅರ್ಧನಾರೀಪುರ ಚೆಕ್ ಪೋಸ್ಟ್ ಹಾಕಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚೆಕ್ ಪೋಸ್ಟ್ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ಸಂಚಾರ ತೆರವು ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಗ್ರಾಮಸ್ಥರಿಗೆ ಸಣ್ಣದೊಂದು ಆತಂಕ ಮನೆ ಮಾಡಿದೆ. ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲಿವೆ. ಚೆಕ್ ಪೋಸ್ಟ್ ತೆರವಿನಿಂದಾಗಿ ಕೊರೊನಾ ಭಯ ಸ್ಥಳೀಯ ನಿವಾಸಿಗಳಲ್ಲಿ ಶುರುವಾಗಿದೆ.