ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾದ ನಟಿ ರಾಗಿಣಿ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಮುಂಬೈ ಮೂಲದ ವಕೀಲರ ಮೂಲಕ ನಗರದ 33ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಗಿಣಿಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗುತ್ತಿದೆ.
Advertisement
ರಾಗಿಣಿ ಸೇರಿದಂತೆ 14 ಆರೋಪಿಗಳ ವಿರುದ್ಧ ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್ ದಾಖಲಾಗಿದೆ. ಈ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿರುವ ಕಾರಣ ಜಾಮೀನು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
Advertisement
Advertisement
ರಾಗಿಣಿಗೆ ಜಾಮೀನು ಡೌಟ್ ಯಾಕೆ?
1. ರಾಗಿಣಿ ಬಂಧನ ಪ್ರಕರಣದಲ್ಲಿ ಹಾಕಿರುವ ಕಠಿಣ ಸೆಕ್ಷನ್‍ಗಳು
2. ಎನ್‍ಡಿಪಿಎಸ್-21ಸಿ ರಾಗಿಣಿ ಪಾಲಿಗೆ ಬಿಸಿ ತುಪ್ಪ
3. ಇಂತಹ ಕೇಸ್‍ನಲ್ಲಿ ಸೆಷನ್ಸ್ ಕೋರ್ಟ್ ಬೇಲ್ ನೀಡುವ ಸಾಧ್ಯತೆ ಕಡಿಮೆ
4. ರಾಗಿಣಿ ವಿರುದ್ಧ ಸಿಸಿಬಿಗೆ ಲಭ್ಯ ಆಗಿರುವ ಪ್ರಮುಖ ಸಾಕ್ಷ್ಯ
5. ರೇಡ್ ವೇಳೆ ಸಿಕ್ಕಿವೆ ರಾಗಿಣಿ ಲಾಕ್ ಮಾಡುವ `ಸಾಕ್ಷಿ’
6. ನೋಟಿಸ್‌ಗೆ ಉತ್ತರ ನೀಡದೇ ಸಾಕ್ಷಿ ನಾಶ ಪ್ರಯತ್ನ ಆರೋಪ
7. ಕಸ್ಟಡಿಯಲ್ಲಿದ್ದರೂ ವಿಚಾರಣೆಗೆ ಸರಿಯಾಗಿ ಸಹಕರಿಸದ ಆರೋಪ
Advertisement
ಸಿಸಿಬಿ ವಕೀಲರ ವಾದವೇನು?
ರಾಗಿಣಿ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ. ಅಷ್ಟೇ ಅಲ್ಲದೇ ಮೆಡಿಕಲ್ ವರದಿ ಬರಬೇಕಿದೆ. ಜಾಮೀನಿನ ಮೇಲೆ ಹೊರಗಡೆ ಹೋದ್ರೆ ಸಾಕ್ಷ್ಯಾನಾಶ ಆಗುವ ಸಾಧ್ಯತೆಯಿದೆ. ಇನ್ನೂ ಸಾಕಷ್ಟು ಆರೋಪಿಗಳ ಬಂಧನ ಬಾಕಿ ಇದೆ. ರಾಗಿಣಿ ಮೊಬೈಲ್ ಇನ್ನೂ ರಿಟ್ರೀವ್ ಆಗಿಲ್ಲ ಇದನ್ನೂ ಓದಿ: ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ: ಜಮೀರ್
ರಾಗಿಣಿ ಪರ ವಕೀಲರ ವಾದವೇನು?
ತನಿಖೆಗೆ ನನ್ನ ಕಕ್ಷಿದಾರರು ಸಹಕಾರ ನೀಡುತ್ತಿದ್ದು, ಸಾಕ್ಷಿ ನಾಶ ಮಾಡಲ್ಲ ಊರು ಬಿಟ್ಟು ಹೋಗುವುದಿಲ್ಲ. ಈಗಾಗಲೇ ಪೊಲೀಸರ ಕಸ್ಟಡಿಯಲ್ಲಿ 8 ದಿನ ಕಳೆದಿದ್ದಾರೆ. ತನಿಖೆಗೆ ಇನ್ನೂ ಹೆಚ್ಚು ಕಾಲಾವಕಾಶ ಆಗತ್ಯ ಇಲ್ಲ. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು.
ಯಾವ ಸೆಕ್ಷನ್ ಏನು ಹೇಳುತ್ತದೆ?
ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.
ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ
ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.
ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.
ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.
ಐಪಿಸಿ 120 ಬಿ – ಅಪರಾಧಿಕ ಒಳಸಂಚು.