ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಸಂಪತ್ ರಾಜ್, ಶಾಸಕನ ಮನೆಗೆ ಬೆಂಕಿ ಹಾಕಿದವರಿಗೂ ನನಗೂ ಸಂಬಂಧ ಇಲ್ಲ. ನಾನು ಶಾಸಕನ ಮನೆಗೆ ಬೆಂಕಿ ಹಚ್ಚಿಸಿಲ್ಲ. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಯಾವ ಕಾರಣಕ್ಕೆ ಬಂಧಿಸಿದ್ರಿ..?, ನಾನು ಮಾಡಿರೋ ತಪ್ಪಾದ್ರೂ ಏನು ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಬೆಂಕಿ ಹಚ್ಚಿಸೋದಾಗಿದ್ರೆ ಹಿಂದೂಗಳ ಕೈಯಲ್ಲೇ ಹಚ್ಚಿಸುತ್ತಿದ್ದೆ. ಮುಸ್ಲಿಮರನ್ನ ಯಾಕೆ ಬಳಸಿಕೊಳ್ಳಬೇಕಿತ್ತು. ನಾವೆಲ್ಲ ಓಡಾಡಿ ಅಖಂಡ ಶ್ರೀನಿವಾಸಮೂರ್ತಿಯನ್ನ ಗೆಲ್ಲಿಸಿದ್ದು, ಇವರೆಲ್ಲ ಹೀಗೆ ಮಾಡ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಜಮೀರ್ ಸ್ಟೇಷನ್ ಬಳಿ ಬಂದಾಗ ನಾನು ಹೋಗ್ಬೋದಿತ್ತಲ್ಲ ಎಂದು ಸಂಪತ್ ರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ
Advertisement
Advertisement
ಅರುಣ್, ಸಂತೋಷ್‍ನನ್ನ ಭೇಟಿಯಾಗಿದ್ದು ನಿಜ. ಹಾಗಂತ ಬೆಂಕಿ ಹಚ್ಚಿ ಅಂತ ನಾನು ಹೇಳಿಲ್ಲ. ನಾನು ಎಲ್ಲೂ ತಲೆ ಮರೆಸಿಕೊಂಡು ಓಡಿ ಹೋಗಿರಲಿಲ್ಲ. ಕೋವಿಡ್ ಇದ್ದ ಕಾರಣ ಐಸೋಲೇಷನ್‍ನಲ್ಲಿದ್ದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಯಾರಿಗೂ ತೊಂದರೆ ಆಗಬಾರದು ಅಂತ ಮನೆಯಲ್ಲೇ ಐಸೊಲೇಟ್ ಆಗಿದ್ದೆ ಎಂದು ಬಂಧನದಲ್ಲಿರುವ ಸಂಪತ್ ರಾಜ್ ಸಿಸಿಬಿ ಪೊಲೀಸರ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸಂಪತ್ ರಾಜ್ ತಪ್ಪಿತಸ್ಥ ಅನ್ನೋದನ್ನು ಪೊಲೀಸರು ಪ್ರೂವ್ ಮಾಡ್ಲಿ: ಸಿದ್ದರಾಮಯ್ಯ
ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ನನ್ನ ಸಿಸಿಬಿ ಪೊಲೀಸರು ಕೊನೆಗೂ ಬೆಂಗಳೂರಲ್ಲೆ ಬಂಧಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ರಾತ್ರಿ 9 ಗಂಟೆಗೆ ಸಂಪತ್ ರಾಜ್ ನನ್ನ ಬಂಧಿಸಿರೋ ಸಿಸಿಬಿ, ಬೆಳಗ್ಗೆ ಎಂಟು ಗಂಟೆಗೆ ಸಿಸಿಬಿ ಕಚೇರಿಗೆ ಕರೆತಂದ್ರು. ಬಳಿಕ ತನಿಖಾಧಿಕಾರಿಗಳಾದ ಎಸಿಪಿ ವೇಣುಗೋಪಾಲ್, ಡಿಸಿಪಿ ಕುಮಾರ್ ಮಧ್ಯಾಹ್ನಾದವರೆಗೂ ವಿಚಾರಣೆ ನಡೆಸಿದರು. ಬಳಿಕ ನಾಲ್ಕು ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಂಪತ್ ರಾಜ್ ನನ್ನ 10 ದಿನ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿಕೊಂಡ್ರು. ಆದರೆ ನ್ಯಾಯಾಧೀಶರು 2 ದಿನ ಪಿಸಿ ಕಸ್ಟಡಿಗೆ ಅಂದರೆ 19 ರವರೆಗೆ ತನಕ ಪಿಸಿ ಕಸ್ಟಡಿಗೆ ಕೊಟ್ಟು ಆದೇಶ ಹೊರಡಿಸಿದರು. ಇದನ್ನೂ ಓದಿ: ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಆರೋಗ್ಯ ಸರಿ ಇರಲಿಲ್ಲ ಅಷ್ಟೇ: ಡಿಕೆಶಿ