ಮಡಿಕೇರಿ: ‘ನಾನು ಅವನಲ್ಲ, ಅವಳು’ ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಅವರ ಕೊನೆಯ ಆಸೆಯೊಂದನ್ನು ‘ಉಸಿರು’ ತಂಡ ಪೂರ್ಣಗೊಳಿಸಿದೆ.
Advertisement
ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಮೇಲ್ಛಾವಣಿಗಳಿಗೆ ‘ಉಸಿರು’ ತಂಡ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸಿದೆ. ಕೋವಿಡ್ ಎರಡನೇ ಅಲೆ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್ ನೀಡುವ ಸಲುವಾಗಿ ರೂಪುಗೊಂಡ ‘ಉಸಿರು’ ತಂಡದಲ್ಲಿ ಸಂಚಾರಿ ವಿಜಯ್ ಕೂಡ ಇದ್ದರು. ‘ಉಸಿರು’ ತಂಡದ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಚಾರಿ ವಿಜಯ್ ಮುಂದಾಗಿದ್ದರು.
Advertisement
Advertisement
ಅದೆಲ್ಲ ಕಾರ್ಯರೂಪಕ್ಕೆ ಬರುವ ಮುನ್ನವೇ ಅಪಘಾತದಿಂದಾಗಿ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿಬಿಟ್ಟರು. ಉಸಿರು ತಂಡದಲ್ಲಿದ್ದಾಗ, ಸಂಚಾರಿ ವಿಜಯ್ ಅವರು ತಂಡದಲ್ಲಿದ್ದ ನಿರ್ದೇಶಕ ಕವಿರಾಜ್ ಹಾಗೂ ನೀತು ಶೆಟ್ಟಿ, ಸೇರಿದಂತೆ ತಂಡದ ಸದಸ್ಯರೊಂದಿಗೆ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಮೇಲ್ಛಾವಣಿಗಳಿಗೆ ಟಾರ್ಪಲ್ ಹೊದಿಕೆ ಹೊದಿಸುವ ಬಗ್ಗೆ ಹಾಗೂ ಕೊಡಗು ಹಾಗೂ ಮೈಸೂರು ಗಡಿಭಾಗದ ನಾಗರಹೊಳೆ ಪ್ರದೇಶದ ಸುತ್ತಮುತ್ತಲೂ ವಾಸ ಇರುವ ಹಾಡಿ ನಿವಾಸಿಗಳ ಮನೆಗಳಿಗೆ ಟಾರ್ಪಲ್ ಹಾಕಿಸುಕೊಂಡುವಂತೆ ‘ಉಸಿರು’ ತಂಡದ ಸದಸ್ಯರ ಜೊತೆ ಸಂಚಾರಿ ವಿಜಯ್ ಚರ್ಚೆ ಮಾಡಿದ್ದರು. ಇದನ್ನೂ ಓದಿ: ಸಂಚಾರಿ ವಿಜಯ್ ಇದ್ದಿದ್ರೆ ಯಾವ ಸಿನಿಮಾಗಳಲ್ಲಿ, ಯಾವ್ಯಾವ ಅವತಾರದಲ್ಲಿ ಕಾಣಿಸಿಕೊಳ್ತಿದ್ರು?
Advertisement
ಸಂಚಾರಿ ವಿಜಯ್ ನಿಧನದ ಬಳಿಕ ಅವರ ಗೌರವಾರ್ಥವಾಗಿ, ಸಂಚಾರಿ ವಿಜಯ್ ಅವರ ಆಸೆಯನ್ನು ನೆರವೇರಿಸಲು ‘ಉಸಿರು’ ತಂಡ ನಗರಹೊಳೆಯ ಸುತ್ತಮುತ್ತಲಿನ ವಾಸ ಇರುವ ಹಾಡಿ ನಿವಾಸಿಗಳ ಮನೆಗಳಿಗೆ ತಂಡ ಭೇಟಿದೆ. ಇತ್ತೀಚೆಗಷ್ಟೇ ಟಾರ್ಪಲ್ ಹೊದಿಕೆ ಹೊದಿಸಲು ಅಳತೆ ತೆಗೆದುಕೊಂಡಿದ್ದ ‘ಉಸಿರು’ ತಂಡ ಇದೀಗ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆಯನ್ನು ಹೊದಿಸಿದೆ. ಆ ಮೂಲಕ ಸಂಚಾರಿ ವಿಜಯ್ ಅವರ ಆಸೆ ನೆರವೇರಿಸಿ, ‘ಉಸಿರು’ ತಂಡ ಗೌರವ ನಮನ ಸಲ್ಲಿಸಿದೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ಸಂಚಾರಿ ವಿಜಯ್ ಸ್ಮರಣೆ ಮಾಡಿದ ಸ್ಪರ್ಧಿಗಳು