– ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ಬಯಲು
– ನಾಲ್ವರು ಆರೋಪಿಗಳು ಅರೆಸ್ಟ್
ಮಂಗಳೂರು: ಜಿಲ್ಲೆಯ ಮೂಲ್ಕಿಯಲ್ಲಿ ಹಾಡಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಬ್ದುಲ್ ಲತೀಫ್(38) ಹತ್ಯೆಯಾದ ಉದ್ಯಮಿ. ಮೂಡಬಿದ್ರೆಯಲ್ಲಿ ಶುಕ್ರವಾರ ಉದ್ಯಮಿಯಾಗಿರುವ ಅಬ್ದುಲ್ ಲತೀಫ್‍ರನ್ನು ದುಷ್ಕರ್ಮಿಗಳು ತಲ್ವಾರ್, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಇದೀಗ ಹಂತಕರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಸಿ ಕ್ಯಾಮೆರಾ ಪೊಲೀಸರಿಗೆ ಲಭ್ಯವಾಗಿದೆ.
Advertisement
Advertisement
ಕಾರು ಮತ್ತು ಬೈಕಿನಲ್ಲಿ ಬಂದ ಸುಮಾರು ಒಂಭತ್ತು ಮಂದಿ ದುಷ್ಕರ್ಮಿಗಳು ಜನರೆದುರಿನಲ್ಲೇ ಬೀಭತ್ಸವಾಗಿ ದಾಳಿ ಮಾಡಿದ್ದಾರೆ. ಆಗ ಮೃತ ಲತೀಫ್ ತನ್ನ ಪ್ರಾಣ ರಕ್ಷಣೆಗೆ ಅವರಿಂದ ತಪ್ಪಿಸಿಕೊಂಡು ರಸ್ತೆಯೆಲ್ಲಾ ಓಡಾಡಿದ್ದಾರೆ. ಕೊನೆಗೆ ಲತೀಫ್ ಬ್ಯಾಂಕ್ ಒಳಗೆ ಹೋಗಲು ಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗದಲ್ಲೇ ಲತೀಫ್‍ಗೆ ಚೂರಿಯಿಂದ ಪದೇ ಪದೇ ಇರಿದಿದ್ದಾರೆ.
Advertisement
Advertisement
ಅಲ್ಲದೇ ದೊಣ್ಣೆಯಿಂದ ಹೊಡೆದು ಅಲ್ಲಿಂದು ಪರಾರಿಯಾಗಿದ್ದಾರೆ. ಆಗ ಲತೀಫ್ ಮೆಟ್ಟಿಲುಗಳ ಮೇಲೆ ಉರುಳಾಡಿ ನರಳಿ ಕೊನೆಗೆ ಅಲ್ಲೇ ಪ್ರಾಣಬಿಟ್ಟಿದ್ದಾರೆ. ಇದೆಲ್ಲವೂ ಲಭ್ಯವಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈಯಕ್ತಿಕ ದ್ವೇಷದಿಂದ ಈ ಹತ್ಯೆ ನಡೆದಿದ್ದು, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಸದ್ಯಕ್ಕೆ ಮಲ್ಕಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಲ್ಕಿ ನಿವಾಸಿ ಮೊಹಮ್ಮದ್ ಹಾಸಿಮ್, ನಿಸಾರ್, ಮೊಹಮ್ಮದ್ ರಾಝಿಂ, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.