ಉಡುಪಿ: ಜಿಲ್ಲೆಯಲ್ಲಿ 54 ದಿನಗಳ ನಂತರ ಸಲೂನ್ ಓಪನ್ ಆಗಿದೆ. ಲಾಕ್‍ಡೌನ್ ಆರಂಭದಿಂದ ಕೂದಲು ಗಡ್ಡ ಬಿಟ್ಟು ಟೆನ್ಷನ್ ಮಾಡಿಕೊಂಡಿದ್ದ ಪುರುಷರು ಫುಲ್ ರಿಲೀಫ್ ಆಗಿದ್ದಾರೆ.
ಉಡುಪಿಯಲ್ಲಿ ಹೇರ್ ಕಟ್ಟಿಂಗ್ ಸಲೂನ್‍ಗಳು ಬಂದ್ ಆಗಿ 54 ದಿನ ಕಳೆದಿದೆ. ಲಾಕ್‍ಡೌನ್ ಘೋಷಣೆ ಆಗುವ ಮೊದಲೇ ಸಲೂನ್ ಗಳನ್ನು ಉಡುಪಿಯಲ್ಲಿ ಬಂದ್ ಮಾಡಲಾಗಿತ್ತು. ಒಟ್ಟು ನಾಲ್ಕು ಹಂತಗಳಲ್ಲಿ ಲಾಕ್‍ಡೌನ್ ರಿಲೀಸ್ ಆಗುತ್ತಾ ಬಂದರೂ ಹೇರ್ ಕಟ್ಟಿಂಗ್ ಗೆ ಅವಕಾಶ ಸರ್ಕಾರ ಕೊಟ್ಟಿರಲಿಲ್ಲ.
Advertisement
Advertisement
ಗ್ರೀನ್ ಝೋನ್ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಲೂನಿಗೆ ಷರತ್ತುಬದ್ಧ ವಿನಾಯಿತಿಗಳನ್ನು ಕೊಟ್ಟಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ಸಲೂನ್ ಗಳು ಇಂದು ತೆರೆದಿದೆ. ಮಾಸ್ಕ್ -ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ಜೊತೆಗೆ ಸಾಕಷ್ಟು ಕಟ್ಟುನಿಟ್ಟಿನ ಷರತ್ತುಗಳನ್ನು ಜಿಲ್ಲಾಡಳಿತ ವಿಧಿಸಿದೆ.
Advertisement
ಹೇರ್ ಕಟ್ಟಿಂಗ್, ಶೇವಿಂಗ್ ಮಾಡಲು ಬೆಳವಣಿಗೆ ಬರುವ ಗ್ರಾಹಕರು ಮುಂಚಿತವಾಗಿಯೇ ಮಾಲೀಕನಿಗೆ ಫೋನ್ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬೇಕು. ಮಾಲೀಕರು ಗ್ರಾಹಕರಿಗೆ ಕೊಟ್ಟ ಸಮಯಕ್ಕೆ ಬಂದು ಹೇರ್ ಕಟ್ಟಿಂಗ್, ಶೇವಿಂಗ್ ಮಾಡಿಕೊಂಡು ವಾಪಸ್ಸಾಗಬೇಕು. ಸಲೂನ್ ಮುಂಭಾಗ ಮತ್ತು ಒಳಭಾಗದಲ್ಲಿ ಜನ ಜಮಾಯಿಸುವಂತಿಲ್ಲ. ಪ್ರತಿಯೊಬ್ಬ ಗ್ರಾಹಕನಿಗೆ ಉಪಯೋಗಿಸಿದ ಬಟ್ಟೆಯನ್ನು ಪೆಟ್ರೋಲ್ ಅಥವಾ ಸಾಬೂನಿನ ನೀರಿನಲ್ಲಿ ಮುಳುಗಿಸಿಡಬೇಕು. ಯೂಸ್ ಆಂಡ್ ಥ್ರೋ ಶೇವಿಂಗ್ ಕಿಟ್ ಗಳನ್ನು ಮಾತ್ರ ಬಳಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಈ ಎಲ್ಲ ನಿಯಮಗಳನ್ನು ಪಾಲಿಸಿ ದಿನಕ್ಕೆ ಹದಿನೈದರಿಂದ ಇಪ್ಪತ್ತು ಜನರಿಗೆ ಮಾತ್ರ ಕ್ಷೌರ ಸೇವೆ ಕೊಡಲು ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ.
Advertisement
ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ್ ಭಂಡಾರಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೂಪಿಸಿದ ಎಲ್ಲ ನಿಯಮಾವಳಿಗಳನ್ನು ಪಾಲಿಸಿಕೊಂಡು ಸೇವೆಯನ್ನು ಆರಂಭಿಸಿದ್ದೇವೆ. ಗ್ರಾಹಕರ ಆರೋಗ್ಯದ ಬಗ್ಗೆ ನಮಗೂ ಕಾಳಜಿ ಇದೆ. ಹೊಸ ಗ್ರಾಹಕರಿಗೆ ನಾವು ಕಟ್ಟಿಂಗ್, ಶೇವಿಂಗ್ ಯಾವುದೇ ಕಾರಣಕ್ಕೂ ಮಾಡುವುದಿಲ್ಲ. ಫೋನ್ ಮಾಡಿ ಬುಕ್ಕಿಂಗ್ ಮಾಡಿ ಸಮಯ ತೆಗೆದುಕೊಂಡ ಗ್ರಾಹಕರಿಗೆ ಸೇವೆ ನೀಡುತ್ತೇವೆ ಎಂದರು.
ಐವತ್ತು ದಿನದ ನಂತರ ಕಟ್ಟಿಂಗ್ ಶೇವಿಂಗ್ ಮಾಡಿಕೊಂಡ ಗ್ರಾಹಕ ರಾಜೇಶ್ ಮಾತನಾಡಿ, ಮನೆಯಲ್ಲೇ ಇಪ್ಪತ್ತೈದು ದಿವಸದ ನಂತರ ಶೇವಿಂಗ್ ಮಾಡಿದ್ದೆ. ಆದರೆ ಇದೀಗ ಹೇರ್ ಕಟ್ಟಿಂಗ್ ಮಾಡಿಸಿ ಕೊಂಡಿರುವುದು ಬಹಳಷ್ಟು ನನಗೆ ರಿಲೀಫ್ ಸಿಕ್ಕಿದೆ. ಈ ಕೊರೊನಾ ನಿಯಮ ಜೀವನ ಪರ್ಯಂತ ಮುಂದುವರಿಯಬೇಕು. ಕೊರೊನಾ ಸಂದರ್ಭದಲ್ಲಿ ನಾವು ಕಲಿತ ಪಾಠ ಅದು ನಮ್ಮ ಜೀವನದ ಉದ್ದಕ್ಕೂ ಪಾಲಿಸುವಂತಾಗಬೇಕು ಎಂದು ಹೇಳಿದರು.
ಯೂಸ್ ಆಂಡ್ ಥ್ರೋ ಹೇರ್ ಕಟ್ಟಿಂಗ್ ಬಟ್ಟೆಗಳು, ಟಿಶ್ಯೂ ಪೇಪರ್ ಕಿಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸೆಲೂನ್ ಮಾಲೀಕರಿಗೆ ದುಬಾರಿಯಾದರೂ ಸದ್ಯ ಕ್ಷೌರ ಸೇವೆಯನ್ನು ಉಡುಪಿ ಜಿಲ್ಲೆಯಾದ್ಯಂತ ಆರಂಭಿಸಲಾಗಿದೆ.