ದಾವಣಗೆರೆ: ಉತ್ತರ ಪ್ರದೇಶ ರಾಜ್ಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾರಿಗೆ ತಂದಿರುವ ಜನಸಂಖ್ಯಾ ನೀತಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ವಾಗತ ಮಾಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದ್ದು, ಜನಸಂಖ್ಯೆ ನಿಯಂತ್ರಣ ಮಾಡಿದ್ರೆ ಅನುಕೂಲ ಆಗುತ್ತೆ. ಜನಸಂಖ್ಯೆ ನಿಯಂತ್ರಣ ಮಾಡುವುದರಿಂದ ಎಲ್ಲಾ ಮಕ್ಕಳಿಗೆ, ಜನರಿಗೆ ಮೂಲಭೂತ ಸೌಕರ್ಯ ಸಿಗುತ್ತೆ. ಜನಸಂಖ್ಯೆ ಜಾಸ್ತಿಯಾದರೆ ಸೌಲಭ್ಯಗಳ ಕೊರತೆಯಾಗುತ್ತದೆ, ಎಲ್ಲೋ ಒಂದು ಕಡೆ ಜನಸಂಖ್ಯಾ ನೀತಿ ತರುವುದು ಒಳ್ಳೆಯದು ಎಂದರು.
ವಿಶ್ವದ ದೊಡ್ಡಣ್ಣ ಅಮೆರಿಕ ದೇಶದಲ್ಲಿ 34 ರಿಂದ 35 ಕೋಟಿ ಜನಸಂಖ್ಯೆ ಹೊಂದಿದೆ. ಆದ್ದರಿಂದ ಅಭಿವೃದ್ಧಿ ಯಾಗಿದ್ದು, ಜನಸಂಖ್ಯೆ ಕಡಿಮೆ ಇರುವುದ್ದರಿಂದ ಅಮೆರಿಕ ದೇಶದಲ್ಲಿ ಜನರಿಗೆ ಸೌಲಭ್ಯಗಳು ಸರಿಯಾಗಿ ಸಿಗುತ್ತಿವೆ. ಈಗ ಜನಸಂಖ್ಯೆ ನಿಯಂತ್ರಣ ಮಾಡಿದ್ರೆ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ. ಜನಸಂಖ್ಯೆಗೆ ಕಡಿವಾಣ ಹಾಕಲು ಉತ್ತರ ಪ್ರದೇಶದಲ್ಲಿ ಯೋಗಿ ಆಧಿತ್ಯನಾಥ್ ಜೀ ಅವರು ಈ ಕಾರ್ಯಕ್ರಮ ರೂಪಿಸಿಕೊಂಡಿದ್ದು, ಕರ್ನಾಟಕದಲ್ಲಿ ಕೂಡ ಅದರ ಸಾಧಕ-ಬಾಧಕಗಳನ್ನು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಬನಶಂಕರಿ ದೇವಿಯ ಮೊರೆಹೋದ ನಿರ್ಮಾಪಕ ಉಮಾಪತಿ
ಜನಸಂಖ್ಯಾನೀತಿ ಏನು..?
* ಉತ್ತರಪ್ರದೇಶದಲ್ಲಿ 2 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲಾಗಿದೆ.
* ಸರ್ಕಾರಿ ಉದುಓಗಗಳಿಗೆ ಅರ್ಜಿ ಸಲ್ಲಿಸುವುದನ್ನು ನಿರ್ಬಂದಿಸುತ್ತದೆ.
* ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿ ನೀಡುವುದನ್ನು ನಿಷೇಧಿಸುವ ಪ್ರಸ್ತಾಪ ಇರಿಸಿದೆ.
* ಎರಡು ಮಕ್ಕಳಿಗೆ ತಮ್ಮ ಕುಟುಂಬವನ್ನು ಸೀಮಿತಗೊಳಿಸುವ ದಂಪತೊಗೆ ಪ್ರೋತ್ಸಾಹಧನ ನೀಡುವ ಉದ್ದೇಶ ಹೊಂದಲಾಗಿದೆ.